alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ಸಿಬ್ಬಂದಿ ಕಡ್ಡಾಯವಾಗಿ ಕಟ್ಟಬೇಕು ರಾಖಿ

raki-diyu-damn

ಸಹೋದರತೆಯ ಸಂದೇಶ ಸಾರುವ ರಾಖಿ ಹಬ್ಬವನ್ನು ಆಗಸ್ಟ್ 7 ರಂದು ಎಲ್ಲೆಡೆ ಆಚರಿಸಲಾಗುತ್ತದೆ. ಮಹಿಳಾ ಸಿಬ್ಬಂದಿ ತಮ್ಮ ಸಹೋದ್ಯೋಗಿಗಳಿಗೆ ರಾಖಿ ಕಟ್ಟುವುದನ್ನುಕಡ್ಡಾಯಗೊಳಿಸಿ ಕೇಂದ್ರಾಡಳಿತ ಪ್ರದೇಶವಾದ ದಿಯು ಮತ್ತು ದಮನ್ ನಲ್ಲಿ ಆದೇಶ ಹೊರಡಿಸಲಾಗಿದೆ.

ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಪ್ರಫುಲ್ ಕುಮಾರ್ ಪಟೇಲ್ ಆದೇಶಾನುಸಾರ ಉಪ ಕಾರ್ಯದರ್ಶಿ(ಸಿಬ್ಬಂದಿ) ಗುರುಪ್ರೀತ್ ಸಿಂಗ್ ಆದೇಶ ಹೊರಡಿಸಿದ್ದಾರೆ.

ಎಲ್ಲಾ ಇಲಾಖೆಗಳ ಕಚೇರಿಗಳಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯವಾಗಿ ಹಾಜರಿದ್ದು, ತಮ್ಮ ಸಹೋದ್ಯೋಗಿ ಪುರುಷರಿಗೆ ಕಡ್ಡಾಯವಾಗಿ ರಾಖಿ ಕಟ್ಟಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಬೇರೆ ಧರ್ಮದವರು ಮತ್ತು ಸಹೋದ್ಯೋಗಿಗಳಲ್ಲಿ ಪತಿ ಇದ್ದರೆ ಹೇಗೆಂದು ಸ್ಪಷ್ಟವಾಗಿ ತಿಳಿಸಿಲ್ಲ. ಇಂತಹ ಆದೇಶಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಆಗಸ್ಟ್ 1 ರಂದು ಮಹಿಳಾ ಸಿಬ್ಬಂದಿ ಕಡ್ಡಾಯವಾಗಿ ರಾಖಿ ಕಟ್ಟುವ ಆದೇಶ ಹೊರಡಿಸಲಾಗಿದ್ದು, ಇದನ್ನು ವಾಪಸ್ ಪಡೆಯಬೇಕು. ಇಲ್ಲವೇ ಸ್ಪಷ್ಟವಾಗಿ ತಿಳಿಸಬೇಕೆಂಬ ಒತ್ತಾಯವೂ ಕೇಳಿ ಬಂದಿದೆ. ಇಂತಹ ಆದೇಶವನ್ನು ವಾಪಸ್ ಪಡೆಯಲು ಆಡಳಿತಾಧಿಕಾರಿಗಳು ತೀರ್ಮಾನಿಸಿದ್ದಾರೆ.

ಈ ಹಿಂದೆ 2014 ರಲ್ಲಿ ಕೇಂದ್ರದಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಅವರು, ರಕ್ಷಾ ಬಂಧನವನ್ನು ದೇಶಾದ್ಯಂತ ಆಚರಿಸಬೇಕೆಂದು ಕರೆ ನೀಡಿದ್ದರು. ಹಿಂದೂ ಸಂಸ್ಕೃತಿಯನ್ನು ಗೌರವಿಸುವ ಸಲುವಾಗಿ ರಾಖಿ ಹಬ್ಬ ಆಚರಿಸಬೇಕೆಂದು ತಿಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...