alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಎಂ ಯೋಗಿಗೆ ದಲಿತರು ಸಾಬೂನು ಗಿಫ್ಟ್ ಮಾಡಿದ್ದೇಕೆ?

601566-yogi-adityanatah-ians

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಗುಜರಾತ್ ನ ದಲಿತ ಸಂಘಟನೆಯೊಂದು 125 ಕೆಜಿ ತೂಕದ 16 ಅಡಿ ಉದ್ದದ ಬೃಹತ್ ಸಾಬೂನನ್ನು ಉಡುಗೊರೆಯಾಗಿ ನೀಡಿದೆ. ಇತ್ತೀಚೆಗಷ್ಟೆ ಸಿಎಂ ಯೋಗಿ ಭೇಟಿಗೂ ಮುನ್ನ ದಲಿತರಿಗೆ ಸ್ನಾನ ಮಾಡುವಂತೆ ಸೂಚಿಸಲಾಗಿತ್ತು. ಇದರಿಂದ ಕೆರಳಿದ ದಲಿತ ಸಂಘಟನೆ ಸಾಬೂನನ್ನು ಗಿಫ್ಟ್ ಆಗಿ ಕೊಟ್ಟಿದೆ.

ಕೆಲ ದಿನಗಳ ಹಿಂದಷ್ಟೆ ಖುಷಿನಗರ ಜಿಲ್ಲೆಯ ಮೇನ್ಪುರ್ ದೀನಾಪತ್ತಿ ಗ್ರಾಮದಲ್ಲಿ ಮುಸಾಹರ್ ದಲಿತ ಸಮುದಾಯದವರನ್ನು ಸಿಎಂ ಯೋಗಿ ಭೇಟಿ ಮಾಡಿದ್ದರು. ಈ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಪ್ರತಿಯೊಬ್ಬರೂ ಸ್ನಾನ ಮಾಡಬೇಕೆಂದು ಸೂಚಿಸಲಾಗಿತ್ತು. ಎಲ್ಲರಿಗೂ ಎರಡು ಸೋಪ್ ಹಾಗೂ ಶಾಂಪೂವನ್ನು ಅಧಿಕಾರಿಗಳು ವಿತರಿಸಿದ್ದರು.

ಇದೀಗ ಡಾ.ಅಂಬೇಡ್ಕರ್ ವೇಚನ್ ಪ್ರತಿಬಂಧ ಸಮಿತಿ, ಸಿಎಂಗೆ ಬೃಹತ್ ಸಾಬೂನನ್ನು ಕೊಡುಗೆಯಾಗಿ ಕೊಟ್ಟಿದೆ. ದಲಿತರ ಭೇಟಿಗೂ ಮುನ್ನ ಸಿಎಂ ಯೋಗಿ ಕೂಡ ಸ್ನಾನ ಮಾಡಿಯೇ ಬರಲಿ ಅಂತಾ ಹೇಳಿದೆ. 3200 ರೂಪಾಯಿ ಮೌಲ್ಯದ ಈ ಸಾಬೂನಿನ ಮೇಲೆ ಗೌತಮ ಬುದ್ಧನ ಚಿತ್ರವಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...