alex Certify
ಕನ್ನಡ ದುನಿಯಾ       Mobile App
       

Kannada Duniya

80 ವರ್ಷಗಳ ನಂತ್ರ ಗ್ರಾಮದಲ್ಲಿ ನಡೀತು ಮದುವೆ ಮೆರವಣಿಗೆ

ಆರು ತಿಂಗಳ ಕಾಯುವಿಕೆ ನಂತ್ರ ಕೊನೆಗೂ ದಲಿತರ ಮದುವೆ ಮೆರವಣಿಗೆ ಗ್ರಾಮದಲ್ಲಿ ನಡೆಯಿತು. ಮೇಲ್ಜಾತಿಯವರೇ ಹೆಚ್ಚಿರುವ ಪ್ರದೇಶದಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೆರವಣಿಗೆ ನಡೆಯಿತು. ಉತ್ತರ ಪ್ರದೇಶದ ಕಸ್ಗಂಜ್ ಜಿಲ್ಲೆಯ ಬಸಯಿ ಗ್ರಾಮದ ನಿವಾಸಿ ಸಂಜಯ್ ಮದುವೆ ಭಾನುವಾರ ಅದ್ಧೂರಿಯಾಗಿ ನಡೆಯಿತು.

80 ವರ್ಷಗಳ ನಂತ್ರ ಇದೇ ಮೊದಲ ಬಾರಿ ದಲಿತ ಕುಟುಂಬವೊಂದರ ಮದುವೆ ಅದ್ಧೂರಿಯಾಗಿ ನಡೆಯಿತು. ಮದುವೆ ಸುರಕ್ಷತೆಗಾಗಿ 10 ಪೊಲೀಸ್ ಇನ್ಸ್ಫೆಕ್ಟರ್, 22 ಸಬ್ ಇನ್ಸ್ಫೆಕ್ಟರ್, 35 ಹೆಡ್ ಕಾನ್ಸ್ಟೇಬಲ್ ಹಾಗೂ 100 ಕಾನ್ಸ್ಟೇಬಲ್ಸ್ ನಿಯೋಜನೆ ಮಾಡಲಾಗಿತ್ತು. ಮದುವೆ ದಿಬ್ಬಣಕ್ಕೆ 30 ವಾಹನಗಳನ್ನು ಬಳಸಲಾಗಿತ್ತು. ಈ ವಾಹನಗಳಿಗೆ ಪೊಲೀಸರು ಬೆಂಬಲ ನೀಡಿದ್ದರು.

ಈ ಹಿಂದೆ ದಲಿತ ಕುಟುಂಬದಲ್ಲಿ ನಡೆದ ಮದುವೆ ವೇಳೆ ದಿಬ್ಬಣವನ್ನು ಮೇಲ್ಜಾತಿ ಜನರು ದಾರಿ ಮಧ್ಯೆಯೇ ತಡೆದಿದ್ದರು. ಇದ್ರಿಂದ ಗಲಾಟೆಯಾಗುವ ಸಾಧ್ಯತೆಯಿತ್ತು. ಹಾಗಾಗಿ ಯಾವುದೇ ಅಬ್ಬರವಿಲ್ಲದೆ ಸರಳವಾಗಿ ಮದುವೆ ಮಾಡಲಾಗಿತ್ತು. ಈ ಮದುವೆ ಮೆರವಣಿಗೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಸೇರಿದಂತೆ ಮುಖ್ಯಮಂತ್ರಿಯವರೆಗೆ ಪತ್ರ ಸಲ್ಲಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...