alex Certify
ಕನ್ನಡ ದುನಿಯಾ       Mobile App
       

Kannada Duniya

ದಲಿತರ ಮನೆಯಲ್ಲಿ ಮೋದಿ ಮಂತ್ರಿಯ ಹೊಟೇಲ್ ಊಟ

ದಲಿತರ ಮನೆಯಲ್ಲಿ ಊಟ ಮಾಡುವ ಬಿಜೆಪಿ ನಾಯಕರ ಹೈಡ್ರಾಮಾ ಮುಂದುವರೆದಿದೆ. ದಲಿತರ ಮನೆಯಲ್ಲಿ ಊಟದ ಹೆಸರು ಹೇಳಿ ಹೊಟೇಲ್ ನಿಂದ ಊಟ ತರಿಸಿಕೊಂಡು ತಿಂದ ಇನ್ನೊಂದು ಪ್ರಕರಣ ಬಯಲಾಗಿದೆ. ಉತ್ತರ ಪ್ರದೇಶದ ನಂತ್ರ ಬಿಹಾರದಲ್ಲಿ ಈ ನಾಟಕ ನಡೆದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರದ ಸಚಿವ ಎಸ್.ಎಸ್. ಅಹ್ಲುವಾಲಿಯಾ ದಲಿತರ ಮನೆಗೆ ಹೋಗಿ ಊಟ ಮಾಡಿದ್ದಾರೆ. ಆದ್ರೆ ಇದು ವಿವಾದಕ್ಕೆ ಕಾರಣವಾಗಿದೆ. ಅಹ್ಲುವಾಲಿಯಾ ದಲಿತರ ಮನೆ ಆಹಾರದ ಬದಲು ಹೊಟೇಲ್ ಆಹಾರ ಸೇವನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದ್ರಿಂದ ಅಸಮಾಧಾನಗೊಂಡ ಅಹ್ಲುವಾಲಿಯಾ, ಹೊಟೇಲ್ ನಿಂದ ಆಹಾರ ತರಿಸಿಕೊಂಡಿಲ್ಲ ಎಂದಿದ್ದಾರೆ.

ಕೇಶವ ಪ್ರಸಾದ್ ಮೌರ್ಯ, ಸುರೇಶ್ ರಾಣಾ ಮತ್ತು ಯೋಗಿ ಆದಿತ್ಯನಾಥ್ ನಂತ್ರ ಅಹ್ಲುವಾಲಿಯಾ ದಲಿತರ ಮನೆಗೆ ಹೋಗಿ ಊಟ ಮಾಡಿದ್ದಾರೆ. ದಲಿತರ ಮನೆಯಲ್ಲಿ ಬಿಜೆಪಿ ನಾಯಕರ ಊಟ ಚರ್ಚೆಯ ವಿಷ್ಯವಾಗಿದೆ. ಕೆಲ ಬಿಜೆಪಿ ನಾಯಕರೇ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ದಲಿತರ ಮನೆಗೆ ಹೋಗಿ ಊಟ ಮಾಡುವುದ್ರಿಂದ ದಲಿತರು ಪವಿತ್ರವಾಗುವುದಿಲ್ಲ. ನಮ್ಮ ಮನೆಗೆ ಅವ್ರು ಬಂದು ಊಟ ಮಾಡಿದ್ರೆ ನಾವು ಪವಿತ್ರವಾಗ್ತೇವೆ ಎಂಬ ಮಾತುಗಳು ಬಿಜೆಪಿಯಿಂದ ಕೇಳಿ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...