alex Certify
ಕನ್ನಡ ದುನಿಯಾ       Mobile App
       

Kannada Duniya

ಸೌಂದರ್ಯದ ಗುಟ್ಟು ಬಿಟ್ಟುಕೊಡದ ದಲೈಲಾಮಾ

lama_6

ಟಿಬೆಟಿಯನ್ ಧರ್ಮಗುರು ದಲೈಲಾಮಾ ತಮ್ಮ ಸೌಂದರ್ಯದ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ತಮ್ಮ ಅಂದವಾದ ಹೊಳೆಯುವ ಚರ್ಮಕ್ಕೆ ಕಾರಣ ಏನು ಅನ್ನೋದನ್ನು ಬಹಿರಂಗಪಡಿಸೋದಿಲ್ಲ ಎಂದಿದ್ದಾರೆ. ಗುವಾಹಟಿಯಲ್ಲಿ ದಲೈಲಾಮಾ ಮಾತನಾಡ್ತಾ ಇದ್ರು. ಈ ವೇಳೆ ಮಹಿಳೆಯೊಬ್ಬರು ಎಲ್ಲಾ ಪ್ರೇಕ್ಷಕರ ಪರವಾಗಿ ಪ್ರಶ್ನೆ ಕೇಳ್ತಿದ್ದೇನೆ, ನಿಮ್ಮ ಸೌಂದರ್ಯದ ಗುಟ್ಟೇನು ಅಂತಾ ಕೇಳಿದ್ರು.

ಅದಕ್ಕೆ ಉತ್ತರಿಸಿದ ದಲೈಲಾಮಾ, ತಮ್ಮ ವಯಸ್ಸೀಗ 80 ದಾಟಿದೆ, ಆದ್ರೆ ನಾನು 70 ವರ್ಷದವನಂತೆ ಕಾಣುತ್ತೇನೆ. ಇದರ ರಹಸ್ಯ ಏನು ಅನ್ನೋದನ್ನು ಮಾತ್ರ ನಿಮಗೆಲ್ಲ ಹೇಳುವುದಿಲ್ಲ ಅಂತಾ ತಮಾಷೆ ಮಾಡಿದ್ರು. ಇದಕ್ಕೆಲ್ಲ ಮಾನಸಿಕ ನೆಮ್ಮದಿ ಬಹಳ ಮುಖ್ಯ. ಬಾಹ್ಯ ಸೌಂದರ್ಯಕ್ಕಿಂತ ಅಂತರಂಗದ ಸೌಂದರ್ಯ ಮುಖ್ಯ ಅಂತಾ ದಲೈಲಾಮಾ ಅಭಿಪ್ರಾಯಪಟ್ರು.

ಸಾಮಾಜಿಕ ಬದುಕಿನಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ದಲೈಲಾಮಾ ಹೇಳಿದ್ದಾರೆ. ತಾಯಿಯೇ ತಮ್ಮ ಮೊದಲ ಗುರು. ಮಹಿಳೆಯರು ಜೈವಿಕವಾಗಿ ಹೆಚ್ಚು ಬಲ ಹೊಂದಿರ್ತಾರೆ. ಹಾಗಾಗಿ ಸಮಾಜದಲ್ಲಿ ಅವರ ಪಾಲ್ಗೊಳ್ಳುವಿಕೆ ಬಹಳ ಮುಖ್ಯ ಅಂತಾ ಕಿವಿಮಾತು ಹೇಳಿದ್ರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...