alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಹೆಣ್ಣು ಮಗುವಿನ ತಂದೆಗೆ ಕಟಿಂಗ್, ಶೇವಿಂಗ್ ಫ್ರೀ

gauri idols at lalbaug

ಮುಂಬೈ: ಬೇಟಿ ಬಚಾವ್ ಯೋಜನೆಗೆ ಇನ್ನಷ್ಟು ಬಲ ತುಂಬುವಂತಹ ಪ್ರಯತ್ನಕ್ಕೆ ಕ್ಷೌರಿಕರೊಬ್ಬರು ಮುಂದಾಗಿದ್ದಾರೆ.

ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದ ಬೀಡ್ ಜಿಲ್ಲೆಯ ಕ್ಷೌರಿಕ, ಹೆಣ್ಣು ಮಗು ಹೊಂದಿರುವ ತಂದೆಗೆ ಉಚಿತವಾಗಿ ಕಟಿಂಗ್, ಶೇವಿಂಗ್ ಮಾಡುತ್ತಿದ್ದಾರೆ.

ಕುಂಬೇಪಾಲ್ ಗ್ರಾಮದ ಈಶ್ವರಿ ಜೆಂಟ್ಸ್ ಪಾರ್ಲರ್ ಮಾಲೀಕ 29 ವರ್ಷದ ಅಶೋಕ್ ಪವಾರ್, ತಮ್ಮ ಶಾಪ್ ಗೆ ಬರುವ ಹೆಣ್ಣು ಮಗುವಿನ ತಂದೆಗೆ ಇಂತಹ ಸೇವೆ ನೀಡುತ್ತಿದ್ದಾರೆ.

ತಮ್ಮ ವ್ಯಾಪ್ತಿಯಲ್ಲಿ ಕಾನೂನುಬಾಹಿರವಾಗಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದನ್ನು ಕಂಡಿದ್ದ ಅಶೋಕ್, ಹೆಣ್ಣು ಮಕ್ಕಳ ಮೇಲಿನ ಕಾಳಜಿಯಿಂದ ಇಂತಹ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಅವರಿಗೆ 1 ವರ್ಷದ ಮಗಳಿದ್ದಾಳೆ. ಮಗಳ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷವಾದುದನ್ನು ಮಾಡಬೇಕೆಂಬ ಉದ್ದೇಶದಿಂದ ಜನವರಿ 1 ರಿಂದಲೇ ಇಂತಹ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಒಬ್ಬರಿಗೆ ಕಟಿಂಗ್, ಶೇವಿಂಗ್ ಗೆ 50 ರೂ. ಪಡೆಯುವ ಅಶೋಕ್ ತಿಂಗಳಿಗೆ ಸುಮಾರು 10,000 ರೂ. ಆದಾಯ ಹೊಂದಿದ್ದಾರೆ. ಕೆಲ ಖರ್ಚುಗಳನ್ನು ಕಡಿಮೆ ಮಾಡಿ, ಉಚಿತ ಸೇವೆ ನೀಡುತ್ತಿದ್ದು, ಈಗಾಗಲೇ 15 ಮಂದಿಗೆ ಫ್ರೀಯಾಗಿ ಕಟಿಂಗ್, ಶೇವಿಂಗ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...