alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಇಲ್ಲದ ವೇಳೆ ಮಗಳೊಂದಿಗೆ ಮಲಗಿದ ಪಾಪಿ

ಹೈದರಾಬಾದ್: ದೇಶದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಿದ್ದು, ಹೈದರಾಬಾದ್ ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಪತ್ನಿ ಮನೆಯಲ್ಲಿ ಇಲ್ಲದ ವೇಳೆಯಲ್ಲಿ ಕಾಮುಕನೊಬ್ಬ ಪುತ್ರಿಯ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಡ್ಯಾಡಿ ಎಂದು ಕರೆಯುತ್ತಿದ್ದ ವ್ಯಕ್ತಿಯೇ ಅತ್ಯಾಚಾರ ಎಸಗಿದ್ದರಿಂದ 13 ವರ್ಷದ ಬಾಲಕಿ ಆಘಾತಕ್ಕೆ ಒಳಗಾಗಿದ್ದಾಳೆ. ಬಾಲಕಿಯ ತಾಯಿ ಪತಿ ತೀರಿದ ಬಳಿಕ ಅತ್ಯಾಚಾರ ಎಸಗಿದ ಆರೋಪಿಯೊಂದಿಗೆ ಮದುವೆಯಾಗಿದ್ದು, ಮಕ್ಕಳೊಂದಿಗೆ ವಾಸವಾಗಿದ್ದಳು.

ಆಕೆ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಯಾರಿಗಾದರೂ ವಿಷಯ ತಿಳಿಸಿದಲ್ಲಿ ಕುಟುಂಬದ ನಿರ್ವಹಣೆಯನ್ನು ಕೈಬಿಡುತ್ತೇನೆ. ನಿಮ್ಮನ್ನು ಸಾಯಿಸುತ್ತೇನೆ ಎಂದು ಬೆದರಿಸಿದ್ದಾನೆ.

ಬಾಲಕಿಗೆ ಬೆಲ್ಟ್ ನಿಂದ ಹೊಡೆದು ಬಲವಂತವಾಗಿ ಕಾಮತೃಷೆ ತೀರಿಸಿಕೊಂಡಿದ್ದಾನೆ. ಕಾಮುಕನ ಕೃತ್ಯದಿಂದ ರೋಸಿ ಹೋದ ಬಾಲಕಿ ತಾಯಿಗೆ ವಿಷಯ ತಿಳಿಸಿದ್ದು, ಆಗ ಕಾಮುಕ ಬೆದರಿಸಿದ್ದಾನೆ. ಬಳಿಕ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...