alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಕ್ಲೋನ್‌ನಲ್ಲಿ ಸಿಲುಕಿದ್ದ ಗರ್ಭಿಣಿಯನ್ನು ಕಾಪಾಡಿದ ಎನ್‌ಡಿಆರ್‌ಎಫ್‌ ಸಿಬ್ಬಂದಿ

ದೇಶದಲ್ಲಿ ವಾಯು ಚಂಡಮಾರುತದ ವೇಗ ಕಡಿಮೆಯಾಗಿ, ತಿರುವು ಪಡೆದುಕೊಳ್ಳುತ್ತಿದೆ. ಆದರೆ ಈಗಾಗಲೇ ಆಗಿರುವ ಅನಾಹುತವನ್ನು ಸರಿಪಡಿಸುವ ಕೆಲಸದಲ್ಲಿ ಎನ್‌ಡಿಆರ್‌ಎಫ್‌ ನಿರತವಾಗಿದೆ. ಗುಜರಾತ್‌ನಲ್ಲಿ ಎನ್‌ಡಿಆರ್‌ಎಫ್‌ ತಂಡ ಗರ್ಭಿಣಿ ಹೆರಿಗೆಗೆ ಸಕಾಲದಲ್ಲಿ ನೆರವಾಗಿರುವ ಘಟನೆ ನಡೆದಿದೆ.

ಶಿಯಾಲ್‌ಬೆಟ್‌ ಎಂಬ ದ್ವೀಪದಲ್ಲಿ ಚಂಡಮಾರುತಕ್ಕೆ ಗರ್ಭಿಣಿ ಸಿಲುಕಿದ್ದಾರೆ. ಆದರೆ ಈ ವೇಳೆ ಅವಧಿಗೂ ಮೊದಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಜೀವನ್ಮರಣ ಪರಿಸ್ಥಿತಿಯಲ್ಲಿ ಹೋರಾಡುತ್ತಿದ್ದರು.

ಮಹಿಳೆ ಎದುರಿಸುತ್ತಿದ್ದ ಕಷ್ಟದ ಬಗ್ಗೆ ಎನ್‌ಡಿಆರ್‌ಎಫ್‌ಗೆ ತಿಳಿಯುತ್ತಿದ್ದಂತೆ ಆಕೆಯ ರಕ್ಷಣೆಗೆ ಒಂದು ತಂಡ ಹೋಗಿದ್ದು, ದ್ವೀಪದಿಂದ ಸುರಕ್ಷಿತವಾಗಿ ಕರೆದುಕೊಂಡು ಜಫ್ರಾಬಾದ್‌ ಸರಕಾರಿ ಆಸ್ಪತ್ರೆಗೆ ದಾಖಲಿಸಿದೆ. ಇದೀಗ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...