alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಚುನಾವಣಾ ಪ್ರಚಾರಕ್ಕೆ ಬ್ರೇಕ್ ಹಾಕಿದೆ ‘ಓಖಿ’

ಗುಜರಾತ್ ಚುನಾವಣೆ ಬಿಸಿಗೆ ಓಖಿ ಚಂಡಮಾರುತ ತಣ್ಣೀರೆರಚಿದೆ. ಗುಜರಾತ್ ನ ವಿವಿಧೆಡೆ ರಾಜಕೀಯ ಪಕ್ಷಗಳ ಬೃಹತ್ ರ್ಯಾಲಿ ಆಯೋಜಿಸಲಾಗಿತ್ತು. ಆದ್ರೆ ಚಂಡಮಾರುತದ ಭೀತಿ ಹಾಗೂ ಭಾರೀ ಮಳೆಯಿಂದಾಗಿ ಸಮಾವೇಶಗಳನ್ನೆಲ್ಲ ರದ್ದು ಮಾಡಲಾಗಿದೆ.

ಮೊರ್ಬಿ, ಧರಂಗಧ್ರ ಮತ್ತು ಸುರೇಂದ್ರ ನಗರದಲ್ಲಿ ನಡೆಯಬೇಕಿದ್ದ ರಾಹುಲ್ ಗಾಂಧಿ ಅವರ ಪ್ರಚಾರ ಸಭೆಗಳು ರದ್ದಾಗಿವೆ. ಸೂರತ್ ನಲ್ಲಿ ಪ್ರಧಾನಿ ಮೋದಿ ಪ್ರಚಾರ ನಡೆಸಬೇಕಿತ್ತು. ಅದಕ್ಕೂ ಓಖಿ ಚಂಡಮಾರುತ ಅವಕಾಶ ಕೊಟ್ಟಿಲ್ಲ. ರಜುಲಾ, ಮಹುವಾ ಮತ್ತು ಶಿಹೋರ್ ನಲ್ಲಿ ನಡೆಯಬೇಕಿದ್ದ ಅಮಿತ್ ಶಾ ರ್ಯಾಲಿಗಳು ಸಹ ರದ್ದಾಗಿವೆ.

ನಿನ್ನೆ ಸಹ ಹವಾಮಾನ ವೈಪರೀತ್ಯದಿಂದಾಗಿ ರಾಹುಲ್ ಗಾಂಧಿ ಗುಜರಾತ್ ನ ಅಂಜರ್ ಗೆ ತಡವಾಗಿ ಆಗಮಿಸಿದ್ರು. ಬಹಿರಂಗ ಸಮಾವೇಶದಲ್ಲಿ ಪಾಲ್ಗೊಂಡು ನಂತರ ಅಲ್ಲಿಂದ ನೇರವಾಗಿ ದೆಹಲಿಗೆ ಮರಳಿದ್ದಾರೆ. ಮೋದಿ ಅವರ ಇವತ್ತಿನ ಸಮಾವೇಶ ರದ್ದಾಗಿದ್ದು, ಡಿಸೆಂಬರ್ 8,9 ರಂದು ಪ್ರಚಾರ ಕೈಗೊಳ್ಳುವ ಸಾಧ್ಯತೆ ಇದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...