alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ನಲ್ಲಿ ಓಡುತ್ತೆ ಸೈಕಲ್ –ಮೈಲೇಜ್ ಕೇಳಿದ್ರೆ ದಂಗಾಗೋದು ಗ್ಯಾರಂಟಿ

cyle

ಪ್ರತಿಭೆಗೆ ಕೊನೆ ಇಲ್ಲ ಎನ್ನುವ ಮಾತಿದೆ. ಇದಕ್ಕೆ ಆಗ್ರಾ ವಿದ್ಯಾರ್ಥಿಗಳು ಸಾಕ್ಷಿ. ಪೆಟ್ರೋಲ್ ನಲ್ಲಿ ಓಡುವ ಸೈಕಲ್ ತಯಾರಿಸಿದ್ದಾರೆ ವಿದ್ಯಾರ್ಥಿಗಳು. ಪೆಟ್ರೋಲ್ ನಲ್ಲಿ ಸೈಕಲ್ ಓಡುತ್ತೆ ಎಂದ್ರೆ ಮೈಲೇಜ್ ಎಷ್ಟು ಕೊಡುತ್ತೆ ಅಂತಾ ನೀವು ಕೇಳ್ತಿರಾ? ಅದ್ರ ಮೈಲೇಜ್ ಕೇಳಿದ್ರೆ ನೀವು ದಂಗಾಗಿ ಹೋಗ್ತಿರಾ.

ಒಂದು ಲೀಟರ್ ಗೆ 200 ಕಿ.ಮೀ ಚಲಿಸುತ್ತೆ ಸೈಕಲ್. ಬೈಕ್ ನಂತೆ ಪ್ರತಿ ಗಂಟೆಗೆ 35 ಕಿಲೋಮೀಟರ್ ಓಡುತ್ತಂತೆ. ಕೀಟನಾಶಕಗಳನ್ನು ಸಿಂಪಡಿಸುವ ಯಂತ್ರದಿಂದ ಈ ಸೈಕಲ್ ತಯಾರಿಸಲಾಗಿದೆ. ಪೆಟ್ರೋಲ್ ಟ್ಯಾಂಕ್ ಆಗಿ ಸೈಕಲ್ ಪೈಪನ್ನು ಬಳಸಲಾಗಿದೆ. ಸೈಕಲ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ಹಿಡಿಯುತ್ತೆ. ಹಾಗೆ ಸೈಕಲ್ ಹ್ಯಾಂಡ್ಲ್ ಎಕ್ಸ್ ಲೇಟರ್ ಆಗಿ ಕೆಲಸ ಮಾಡುತ್ತದೆ.

ಆಟೋಮೊಬೈಲ್ ಎಂಜಿನಿಯರಿಂಗ್ ಮಾಡ್ತಿರುವ ಮುಕುಲ್ ಗೌಡ, ವಿಕ್ರಾಂತ್ ರಾವತ್, ರಂಜುಲ್  ಮಿಶ್ರಾ, ಸುಧಾಂಶು ಗೋಸ್ವಾಮಿ ಮತ್ತು ತುಷಾರ್ ಗೋಯಲ್ ಕಲ್ಪನೆಯಲ್ಲಿ ಈ ಸೈಕಲ್ ರಚನೆಯಾಗಿದೆ. ಈ ಐದು ವಿದ್ಯಾರ್ಥಿಗಳು ಯುಟ್ಯೂಬ್ ನಲ್ಲಿ ಅಮೆರಿಕಾದಲ್ಲಿ ಸಿದ್ಧವಾದ ಪೆಟ್ರೋಲ್ ಸೈಕಲ್ ನೋಡಿದ್ದರಂತೆ. ನಂತರ ತಾವೇ ಸೈಕಲ್ ತಯಾರಿಸಲು ಮುಂದಾದರಂತೆ. ಇದನ್ನು ತಯಾರಿಸಲು 8 ಸಾವಿರ ರೂಪಾಯಿ ಖರ್ಚಾಗಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...