alex Certify
ಕನ್ನಡ ದುನಿಯಾ       Mobile App
       

Kannada Duniya

30 ಪರ್ಸೆಂಟ್ ಕಮಿಷನ್ ಗೆ ಸಿಗ್ತಿತ್ತು ಹೊಸ ನೋಟು

vijayawa

ವಿಜಯವಾಡ: ನಿಮ್ಮಲ್ಲಿ ಎಷ್ಟೇ ಮೊತ್ತದ ಹಳೆ ನೋಟುಗಳಿರಲಿ. 30 ಪರ್ಸೆಂಟ್ ಕಮಿಷನ್ ಕೊಟ್ರೆ ಸಾಕು, ಕ್ಷಣಾರ್ಧದಲ್ಲಿ ಹೊಸ ನೋಟು ನಿಮ್ಮ ಕೈ ಸೇರುತ್ತದೆ.

ಹೀಗೆ ಕಮಿಷನ್ ಪಡೆದು ಹಳೆ ನೋಟುಗಳಿಗೆ ಹೊಸ ನೋಟುಗಳನ್ನು ಬದಲಿಸಿಕೊಡುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ವಿಜಯವಾಡ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡ, ಓಬಳರಾಜಪುರಂ, ಸೂರ್ಯಪಾದ ಮೊದಲಾದ ಕಡೆಗಳಲ್ಲಿ ನೋಟ್ ದಂಧೆ ನಡೆಸುತ್ತಿದ್ದ 10 ಮಂದಿಯನ್ನು ಬಂಧಿಸಲಾಗಿದೆ.

ಓರ್ವ ಮಹಿಳೆ ಕೂಡ ಈ ತಂಡದಲ್ಲಿದ್ದಾಳೆ. ಇವರು ವಿವಿಧ ಬ್ಯಾಂಕ್ ಗಳಿಂದ ಲಕ್ಷಾಂತರ ರೂಪಾಯಿ 2000 ರೂ. ಮುಖಬೆಲೆಯ ಹೊಸ ನೋಟು ಪಡೆದುಕೊಂಡು ಅವುಗಳನ್ನು ಹಳೆ ನೋಟುಗಳಿಗೆ ಬದಲಿಸಿಕೊಡುತ್ತಿದ್ದರು.

ಬ್ಲಾಕ್ ಮನಿಯನ್ನು ಎಕ್ಸ್ ಚೇಂಜ್ ಮಾಡಿಕೊಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ದಂಧೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ 6 ಲಕ್ಷ ರೂಪಾಯಿ ಹಣ ವಶಕ್ಕೆ ಪಡೆಯಲಾಗಿದೆ. ಈಗಾಗಲೇ ಕೋಟ್ಯಂತರ ರೂಪಾಯಿ ಬ್ಲಾಕ್ ಮನಿ ಬದಲಿಸಿಕೊಟ್ಟಿರುವುದಾಗಿ ಬಂಧಿತರು ವಿಚಾರಣೆಯಲ್ಲಿ ತಿಳಿಸಿದ್ದು, ಬ್ಯಾಂಕ್ ಅಧಿಕಾರಿಗಳು ಕೂಡ ಇದರಲ್ಲಿ ಶಾಮೀಲಾಗಿರುವ ಸಾಧ್ಯತೆ ಇದೆ.

ಪ್ರಧಾನಿ ಕಾರ್ಯಾಲಯ ಆಂಧ್ರ ಪ್ರದೇಶ ಸರ್ಕಾರಕ್ಕೆ ನೀಡಿದ ಸೂಚನೆಯಂತೆ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಬಂಧಿತರಿಂದ ವಶಪಡಿಸಿಕೊಂಡ ಹೊಸ ನೋಟುಗಳ ಸಿರೀಸ್ ಯಾವ ಬ್ಯಾಂಕ್ ಗೆ ವಿತರಣೆಯಾಗಿತ್ತು ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...