alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲ ಎಟಿಎಂಗಳಲ್ಲಿ ಬರ್ತಿವೆ ನಿಷೇಧಿತ ನೋಟುಗಳು..!

Indian policemen stand guard as people queue up outside a bank to exchange and deposit Indian currency of rupees 500 and 1000 denominations in Ahmadabad, India, Thursday, Nov. 10, 2016. Delivering one of India's biggest-ever economic upsets, Prime Minister Narendra Modi this week declared the bulk of Indian currency notes no longer held any value and told anyone holding those bills to take them to banks. (AP Photo/Ajit Solanki)

ಈಗ ಎಲ್ಲಾ ಬ್ಯಾಂಕ್ ಗಳ ಮುಂದೆ ಜನವೋ ಜನ. ಆದಷ್ಟು ಬೇಗ ಹಳೆ ನೋಟು ಕೊಟ್ಟು ಹೊಸ ನೋಟು ಪಡೆಯಲು ಜನರು ಸಾಲುಗಟ್ಟಿ ನಿಂತಿದ್ದಾರೆ. ಪ್ರತಿ ಬ್ರಾಂಚ್ ನಲ್ಲಿ ದಿನಕ್ಕೆ ಸಾವಿರಾರು ಮಂದಿ ನೋಟು ಬದಲಾಯಿಸಿಕೊಳ್ತಿದ್ದಾರೆ.

ಇದಕ್ಕಾಗಿ ಐದಾರು ಗಂಟೆ ಕ್ಯೂನಲ್ಲಿ ನಿಂತು ಕಾಯಬೇಕು. ಈ ವಾರಾಂತ್ಯದವರಗೆ ಇದೇ ಸ್ಥಿತಿ ಮುಂದುವರಿಯಲಿದೆ ಅನ್ನೋದು ಬ್ಯಾಂಕ್ ಗಳ ಅಭಿಪ್ರಾಯ. ಒಬ್ಬೊಬ್ಬರದು ಒಂದೊಂದು ಸಮಸ್ಯೆ, ಕೆಲವರು ಮೂಲ ದಾಖಲೆ ತಂದಿಲ್ಲ, ಹಲವರಿಗೆ ಅರ್ಜಿ ಭರ್ತಿ ಮಾಡಲು ಗೊತ್ತಿಲ್ಲ, ವೃದ್ಧರಿಗೆ ಹೆಚ್ಚಾಗಿ ತೊಂದರೆಯಾಗ್ತಿದೆ.

ಇದರ ನಡುವೆ ಎಟಿಎಂಗಳಲ್ಲಿ ಮತ್ತೊಂದು ರೀತಿಯ ತಲೆನೋವು. ಎಟಿಎಂನಲ್ಲೇ ಹಣ ಡ್ರಾ ಮಾಡೋಣ ಅಂತಾ ಹೋದ್ರೆ ಮತ್ತದೇ ಹಳೆಯ 500 ಮತ್ತು 1000 ರೂ. ನೋಟುಗಳು ಕೆಲವೆಡೆ ಬರ್ತಿವೆ. ಹೀಗಾಗಿ ಅವುಗಳನ್ನು ಬಂದ್ ಮಾಡಲಾಗಿದೆ. ದೇಶದ ಒಟ್ಟು ಎಟಿಎಂಗಳ ಪೈಕಿ ಹಲವೆಡೆ ಇನ್ನೂ ಹಳೆ ನೋಟುಗಳನ್ನು ತೆಗೆದು ಹೊಸದನ್ನು ಭರ್ತಿ ಮಾಡಿಲ್ಲ. ಕೇವಲ 1 ಲಕ್ಷ ಎಟಿಎಂಗಳಲ್ಲಿ ಮಾತ್ರ ಹೊಸ ನೋಟುಗಳನ್ನು ತುಂಬಿಸಲಾಗಿದೆಯಂತೆ. ಇದೆಲ್ಲ ಸರಿಹೋಗಲು 10 ದಿನಗಳಾದ್ರೂ ಬೇಕು ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು. ಅಲ್ಲಿಯವರೆಗೆ ಜನಸಾಮಾನ್ಯರಿಗೆ ತೊಂದರೆ ತಪ್ಪಿದ್ದಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...