alex Certify
ಕನ್ನಡ ದುನಿಯಾ       Mobile App
       

Kannada Duniya

ಸಮೀಕ್ಷೆ: ಮಧ್ಯಪ್ರದೇಶ ಛತ್ತೀಸ್ಗಢದಲ್ಲಿ ಬಿಜೆಪಿ, ರಾಜಸ್ತಾನದಲ್ಲಿ ಕಾಂಗ್ರೆಸ್

ಲೋಕಸಭೆ ಚುನಾವಣೆಗೂ ಮುನ್ನ ವಿಧಾನಸಭಾ ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಚುರುಕು ಪಡೆದಿದೆ. ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ತಾನದ ವಿಧಾನಸಭೆ ಯಾರ ಪಾಲಾಗಬಹುದು ಎಂಬ ಪ್ರಶ್ನೆ ಶುರುವಾಗಿದೆ. ಫಲಿತಾಂಶ ಬಂದ ಮೇಲೆ ಸತ್ಯ ಹೊರಬರಲಿದೆ. ಆದ್ರೆ ಅನೇಕ ಸಂಸ್ಥೆಗಳು ಚುನಾವಣಾ ಪೂರ್ವ ಸಮೀಕ್ಷೆ ನಡೆಸುತ್ತಿದೆ.

ಸಿಎಸ್ಡಿಎಸ್ ಸರ್ವೆ ಪ್ರಕಾರ ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಬಿಜೆಪಿ ಹಾಗೂ ರಾಜಸ್ತಾನದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎನ್ನಲಾಗ್ತಿದೆ. 230 ಸೀಟುಗಳ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಶೇಕಡಾ 41ರಷ್ಟು ಬಿಜೆಪಿಗೆ, ಶೇಕಡಾ 40 ರಷ್ಟು ಕಾಂಗ್ರೆಸ್ ಗೆ ಹಾಗೂ ಶೇಕಡಾ 19ರಷ್ಟು ಇತರ ಪಕ್ಷಗಳಿಗೆ ಮತ ಬೀಳುವ ಸಾಧ್ಯತೆಯಿದೆ.

ಇನ್ನು 90 ಸೀಟುಗಳಿರುವ ಛತ್ತೀಸ್ಗಢದಲ್ಲಿ ಶೇಕಡಾ 43 ರಷ್ಟು ಬಿಜೆಪಿ, ಶೇಕಡಾ 36 ರಷ್ಟು ಕಾಂಗ್ರೆಸ್ ಹಾಗೂ ಶೇಕಡಾ 21 ರಷ್ಟು ಇತರ ಪಕ್ಷಗಳಿಗೆ ಮತ ಬೀಳುವ ಸಂಭವವಿದೆ.

ಎರಡು ರಾಜ್ಯಗಳಲ್ಲಿ ಬಿಜೆಪಿ ಮುಂದಿದ್ದು, ರಾಜಸ್ತಾನದಲ್ಲಿ ಬಿಜೆಪಿಗೆ ಹಿನ್ನಡೆ ಕಂಡು ಬರ್ತಿದೆ. ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಜನರ ಆಕ್ರೋಶ ಸ್ಪಷ್ಟವಾಗಿ ಕಾಣ್ತಿದೆ. ಕಾಂಗ್ರೆಸ್ ಗೆ ಶೇಕಡಾ 45 ಮತ ಸಿಗುವ ಸಾಧ್ಯತೆಯಿದೆ ಎಂದು ಸಿಎಸ್ಡಿಎಸ್ ಹೇಳಿದೆ.

ಛತ್ತೀಸ್ಗಢದಲ್ಲಿ ನವೆಂಬರ್ 12 ಮತ್ತು 20ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮಧ್ಯಪ್ರದೇಶದಲ್ಲಿ ನವೆಂಬರ್ 28ರಂದು ಮತದಾನ ನಡೆಯಲಿದೆ. ಡಿಸೆಂಬರ್ 7 ರಂದು ರಾಜಸ್ತಾನದಲ್ಲಿ ಮತದಾನ ನಡೆಯಲಿದೆ. ಎಲ್ಲ ರಾಜ್ಯಗಳ ಫಲಿತಾಂಶ ಡಿಸೆಂಬರ್ 11ರಂದು ಹೊರ ಬೀಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...