alex Certify
ಕನ್ನಡ ದುನಿಯಾ       Mobile App
       

Kannada Duniya

ಉಗ್ರರೊಂದಿಗಿನ ಕಾಳಗದಲ್ಲಿ ಗುಂಡೇಟು ತಿಂದಿದ್ದ ಯೋಧ ಮತ್ತೆ ಕರ್ತವ್ಯಕ್ಕೆ ಹಾಜರ್

ಕಾಶ್ಮೀರದಲ್ಲಿ ಉಗ್ರರ ಜೊತೆಗೆ ನಡೆಸಿದ ಕಾಳಗದಲ್ಲಿ 9 ಗುಂಡು ತಗುಲಿ ಗಾಯಗೊಂಡಿದ್ದ ಸಿಆರ್ಪಿಎಫ್ ಕಮಾಂಡೋ ಚೇತನ್ ಕುಮಾರ್ ಚೀತಾ ಮತ್ತೆ ಕರ್ತವ್ಯಕ್ಕೆ ಮರಳಿದ್ದಾರೆ. ಚೇತನ್ ಕುಮಾರ್ ಗೆ ಕೀರ್ತಿ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಚೇತನ್ ಸಿಆರ್ಪಿಎಫ್ 45ನೇ ಬೆಟಾಲಿಯನ್ ನ ಕಮಾಂಡಿಂಗ್ ಆಫೀಸರ್ ಆಗಿದ್ದಾರೆ. 2017ರ ಫೆಬ್ರವರಿ 14ರಂದು ಅವರಿಗೆ 9 ಗುಂಡೇಟು ತಗುಲಿತ್ತು. ಮೆದುಳು, ಹೊಟ್ಟೆ, ಕೈ, ಬಲಗಣ್ಣು ಹಾಗೂ ತೊಡೆಯಲ್ಲಿ ಗುಂಡು ಹೊಕ್ಕಿತ್ತು.

ಸುಮಾರು ಒಂದೂವರೆ ತಿಂಗಳು ಚೇತನ್ ಕುಮಾರ್ ಕೋಮಾದಲ್ಲಿದ್ದರು. ಏಪ್ರಿಲ್ ನಲ್ಲಿ ಅವರಿಗೆ ಪ್ರಜ್ಞೆ ಮರಳಿತ್ತು. ಏಮ್ಸ್ ನಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆ ನಕ್ಸಲ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಕೋಬ್ರಾ ಬೆಟಾಲಿಯನ್ ಸೇರುವ ಇಂಗಿತವನ್ನು ಚೇತನ್ ವ್ಯಕ್ತಪಡಿಸಿದ್ದರು.

ಆದ್ರೆ ಚೇತನ್ ಪೂರ್ತಿಯಾಗಿ ಚೇತರಿಸಿಕೊಳ್ಳಲು 2 ವರ್ಷಗಳು ಬೇಕು ಅಂತಾ ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಸದ್ಯಕ್ಕೆ ಅವರು ಕಚೇರಿ ಕೆಲಸ ನೋಡಿಕೊಳ್ಳಲಿದ್ದಾರಂತೆ. ಸಂಪೂರ್ಣ ಫಿಟ್ ಆದ ಬಳಿಕವಷ್ಟೆ ಕಾರ್ಯಾಚರಣೆಗಿಳಿಯಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...