alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಶಾಸಕರ ದರ್ಬಾರ್

criminals

ಉತ್ತರಪ್ರದೇಶ ವಿಧಾನಸಭೆಗೆ ಆಯ್ಕೆಯಾದ ಒಟ್ಟು ಶಾಸಕರ ಪೈಕಿ ಶೇ.36 ರಷ್ಟು ಮಂದಿ ಅಪರಾಧ ಹಿನ್ನೆಲೆ ಉಳ್ಳವರು. ಕೊಲೆ, ಅತ್ಯಾಚಾರದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇನ್ನು 10 ರಲ್ಲಿ ಓರ್ವ ಶಾಸಕ ಕೋಟ್ಯಾಧಿಪತಿ.

ಒಟ್ಟು 143 (ಶೇ.36) ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಈ ಸಂಖ್ಯೆ 2012 ರಲ್ಲಿ 189 (ಶೇ.47) ಇತ್ತು. ಈ ಪೈಕಿ 107 ಶಾಸಕರು ಗಂಭೀರ ಆರೋಪ ಎದುರಿಸುತ್ತಿದ್ದಾರೆ. 2012ರಲ್ಲಿ ಈ ಸಂಖ್ಯೆ 98 ಇತ್ತು. ಕೊಲೆ, ಹಲ್ಲೆ, ಅತ್ಯಾಚಾರ ಹೀಗೆ ಅತ್ಯಂತ ಗಂಭೀರವಾದ ಕ್ರಿಮಿನಲ್ ಪ್ರಕರಣಗಳನ್ನು ಶಾಸಕರು ಎದುರಿಸುತ್ತಿದ್ದಾರೆ.

8 ಶಾಸಕರ ವಿರುದ್ಧ ಕೊಲೆ ಪ್ರಕರಣವಿದ್ದು, 34 ಶಾಸಕರು ಕೊಲೆಯತ್ನ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಓರ್ವ ಎಂಎಲ್ಎ ಮಹಿಳೆ ಮೇಲೆ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಸಿಲುಕಿದ್ದಾನೆ. ಈ ಬಾರಿ ಉತ್ತರಪ್ರದೇಶದಲ್ಲಿ ಕೋಟ್ಯಾಧಿಪತಿಗಳದ್ದೇ ದರ್ಬಾರ್. ಗೆಲುವು ಸಾಧಿಸಿದ 322 ಅಭ್ಯರ್ಥಿಗಳು ಅಂದ್ರೆ ಶೇ.80ರಷ್ಟು ನೂತನ ಶಾಸಕರು ಕೋಟ್ಯಾಧಿಪತಿಗಳು. 2012ರಲ್ಲಿ ಕೋಟ್ಯಾಧಿಪತಿ ಶಾಸಕರ ಸಂಖ್ಯೆ ಶೇ.67ರಷ್ಟಿತ್ತು.

ಗೆಲುವು ಸಾಧಿಸಿರುವ ಪ್ರತಿ ಶಾಸಕರ ಸರಾಸರಿ ಆಸ್ತಿ 5.92 ಕೋಟಿ ರೂಪಾಯಿ. ಕಣಕ್ಕಿಳಿದಿದ್ದ ಅಭ್ಯರ್ಥಿಗಳ ಸರಾಸರಿ ಆಸ್ತಿ 1.90 ಕೋಟಿ ರೂಪಾಯಿಯಷ್ಟಿತ್ತು. ಇನ್ನು ಶೇ.25ರಷ್ಟು ಶಾಸಕರು 8 ಮತ್ತು 12ನೇ ತರಗತಿ ಪಾಸು ಮಾಡಿದ್ದಾರೆ. ಶೇ.72ರಷ್ಟು ಅಂದ್ರೆ 292 ಶಾಸಕರು ತಾವು ಪದವೀಧರರು ಅಂತಾ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಶಾಸಕರಲ್ಲಿ ಶೇ.10ರಷ್ಟು ಅಂದ್ರೆ 40 ಮಹಿಳೆಯರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...