alex Certify
ಕನ್ನಡ ದುನಿಯಾ       Mobile App
       

Kannada Duniya

ತಗ್ಗಿದ ನೀರು, ಮನೆಗಳಲ್ಲಿ ಮೊಸಳೆ-ಹಾವುಗಳ ಕಾಟ

ತಿರುವನಂತಪುರಂ: ಕೇರಳದ ಪ್ರವಾಹ ಪೀಡಿತ ಮನೆಗಳಲ್ಲಿ ಇದೀಗ ಹೊಸ ಜೀವಗಳು ವಾಸಿಸತೊಡಗಿದೆ. ಪ್ರವಾಹದಲ್ಲಿ ಮುಳುಗಿದ್ದ ಮನೆಗಳಲ್ಲಿ ಹಾವು, ಮೊಸಳೆಗಳು ಕಾಣಿಸಿಕೊಂಡಿದ್ದು, ಜನರು ಮನೆಗಳಿಗೆ ತೆರಳಲು ಭಯಭೀತಗೊಂಡಿದ್ದಾರೆ.

ಕಳೆದ 2 ದಿನಗಳಿಂದ ಮಳೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಪ್ರವಾಹದ ನೀರು ತಗ್ಗಿದೆ. ಸುರಕ್ಷಿತ ಪ್ರದೇಶಗಳ ಗಂಜಿ ಕೇಂದ್ರಗಳಲ್ಲಿರುವ ಜನರು, ತಮ್ಮ ತಮ್ಮ ಮನೆಗಳ ಪರಿಸ್ಥಿತಿ ಅರಿಯಲು ವಾಪಾಸಾಗಿದ್ದು, ಹಾವು, ಮೊಸಳೆಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.

ಚಲಕುಡಿಯಲ್ಲಿ ಮನೆಯೊಳಗೆ ಸಿಕ್ಕ ಮೊಸಳೆಯನ್ನು ಸ್ಥಳೀಯರ ನೆರವಿನೊಂದಿಗೆ ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ. ಏತನ್ಮಧ್ಯೆ ಹಾವು ಹಿಡಿಯುವವರಿಗೆ ಬಿಡುವಿಲ್ಲದಂತಾಗಿದೆ. 2 ದಿನಗಳಲ್ಲಿ ಒಟ್ಟಾರೆ 100ಕ್ಕೂ ಅಧಿಕ ಹಾವುಗಳನ್ನು ಹಿಡಿಯಲಾಗಿದೆ. ಎರ್ನಾಕುಲಂನ ಅಂಗಮಾಲಿಯಲ್ಲಿ 52 ಮಂದಿಗೆ ಹಾವು ಕಚ್ಚಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯುವುದು ಹಾಗೂ ಹಾವುಗಳಿಂದ ರಕ್ಷಣೆ ಪಡೆಯುವ ಸಂಬಂಧ ಅಗತ್ಯ ಮಾಹಿತಿ, ಔ‍ಷಧಿಗಳನ್ನೂ ಪರಿಹಾರ ಶಿಬಿರಗಳಲ್ಲಿ ನೀಡಲಾಗುತ್ತಿದೆ ಎಂದು ಸರಕಾರ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...