alex Certify
ಕನ್ನಡ ದುನಿಯಾ       Mobile App
       

Kannada Duniya

ಕುತ್ತಿಗೆಗೆ ಕ್ಷಮಾಪಣೆ ಪತ್ರ ಕಟ್ಟಿಕೊಂಡು ಬಂದು ಶರಣಾದ ಕುಖ್ಯಾತ ಕ್ರಿಮಿನಲ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ಕುಖ್ಯಾತ ಕ್ರಿಮಿನಲ್ ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದು, ಎನ್ ಕೌಂಟರ್ ಆಗುವ ಭಯದಿಂದ ಸಮಾಜಘಾತುಕ ವ್ಯಕ್ತಿಗಳು ತಾವಾಗಿಯೇ ಬಂದು ಪೊಲೀಸರಿಗೆ ಶರಣಾಗುತ್ತಿದ್ದಾರೆ.

ಈಗ ಅಂತಹುದೇ ಮತ್ತೊಂದು ಪ್ರಕರಣ ನಡೆದಿದ್ದು, ದರೋಡೆ, ಕೊಲೆ ಯತ್ನ ಮೊದಲಾದ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ಪಾತಕಿಯೊಬ್ಬ, ಪ್ರಾಣ ಭಯದಿಂದ ತಾನು ಇನ್ನು ಮುಂದೆ ಭೂಗತ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ. ನನ್ನನ್ನು ಕೊಲ್ಲಬೇಡಿ ಎಂಬ ಫಲಕವನ್ನು ಕುತ್ತಿಗೆಗೆ ನೇತು ಹಾಕಿಕೊಂಡು ಬಂದು ಪೊಲೀಸರಿಗೆ ಶರಣಾಗಿದ್ದಾನೆ.

ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಫೈಜಾನ್ ಅಹ್ಮದ್ ತಾನು ಶರಣಾಗುವ ಮುನ್ನ ಮಾಧ್ಯಮದವರನ್ನು ಭೇಟಿಯಾಗಿದ್ದ. ತಾನು ಪಾತಕ ಲೋಕವನ್ನು ತ್ಯಜಿಸುತ್ತಿದ್ದು, ಮುಂದಿನ ದಿನಗಳನ್ನು ನೆಮ್ಮದಿಯಾಗಿ ಕಳೆಯಲು ಇಚ್ಚಿಸಿದ್ದೇನೆ ಎಂದು ಅಲವತ್ತುಕೊಂಡಿದ್ದ.

ಬಳಿಕ ಅಮ್ರೋಹಾ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಛೇರಿಗೆ ಭೇಟಿ ನೀಡಿ ಅಲ್ಲಿ ಸಹಾಯಕ ರಕ್ಷಣಾಧಿಕಾರಿ ಬ್ರಿಜೇಶ್ ಸಿಂಗ್ ರನ್ನು ಭೇಟಿ ಮಾಡಿ, ತನ್ನ ಪಾತಕ ಕೃತ್ಯಗಳ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿದ್ದಲ್ಲದೇ ಇದಕ್ಕೆ ಪ್ರತಿಯಾಗಿ ಜೈಲಿನಲ್ಲಿ ಕಾಲ ಕಳೆಯುವುದಾಗಿ ತಿಳಿಸಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...