alex Certify
ಕನ್ನಡ ದುನಿಯಾ       Mobile App
       

Kannada Duniya

ಸರಕು ತುಂಬಿದ ಲಾರಿ ಕದ್ದೊಯ್ದ ಹುಡುಗ ಮಾಡಿದ್ದೇನು?

14 ವರ್ಷದ ಬಾಲಕನೊಬ್ಬ 14 ಲಕ್ಷ ರೂ. ಮೌಲ್ಯದ ಸರಕು ತುಂಬಿದ ಲಾರಿಯೊಂದನ್ನು ಕದ್ದೊಯ್ದ. 2 ದಿನಗಳ ಕಾಲ 138 ಕಿ.ಮೀ ದೂರಕ್ಕೆ ಓಡಿಸಿದ. ಆದರ ಡೀಸೆಲ್ ಪೂರ್ತಿ ಖಾಲಿಯಾದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದ.

ಹರ್ಯಾಣದ ಪಲ್ವಾಲ್‌ನಲ್ಲಿ ಈ ಘಟನೆ ನಡೆದಿದೆ. ಉತ್ತರಪ್ರದೇಶದ ಇಟಾ ಜಿಲ್ಲೆಯ ಈ ಬಾಲಕ ಪಲ್ವಾಲ್‌ನಲ್ಲಿ ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ತಿಂಗಳಿಗೆ 5,000 ರೂ. ವೇತನ ಆತನಿಗೆ ದೊರಕುತ್ತಿತ್ತು. ಆದರೆ ಕುಟುಂಬದ ವೆಚ್ಚ ಹಾಗೂ ಆತನ ದೈನಂದಿನ ಖರ್ಚಿಗೆ ಇದು ಸಾಕಾಗುತ್ತಿರಲಿಲ್ಲ. ಅದಕ್ಕೆ ಅವನ ತಲೆಗೆ ಬಂದ ಕೆಟ್ಟ ಐಡಿಯಾವೆಂದರೆ, ಲಾರಿಯನ್ನೇ ಕದ್ದೊಯ್ಯುವುದು. ತನ್ನ ಊರಿಗೆ ಲಾರಿ ಚಲಾಯಿಸಿಕೊಂಡು ಹೊರಟೇಬಿಟ್ಟ.

ಹರ್ಯಾಣ ನಂಬರ್‌ ಪ್ಲೇಟ್ ಲಾರಿಯೊಂದು ಉತ್ತರಪ್ರದೇಶದ ಹೆದ್ದಾರಿಯಲ್ಲಿ ಅಲ್ಲಲ್ಲಿ ನಿಲ್ಲಿಸುತ್ತಾ ಹೋಗುತ್ತಿರುವುದು ಪೊಲೀಸರ ಗಮನಕ್ಕೆ ಬಂತು. ಮೆಹರಾ ಕ್ರಾಸಿಂಗ್‌ನಲ್ಲಿ ಅದೇ ಲಾರಿ ಬಂದಾಗ ಸಹಪು ಠಾಣೆಯ ಪೊಲೀಸರ ತಂಡ ತಡೆಯಿತು. ಚಾಲಕನನ್ನು ಕೆಳಕ್ಕಿಳಿಯಲು ಹೇಳಿದಾಗ, ಇನ್ನೂ ಮೀಸೆ ಚಿಗುರದ, 5 ಅಡಿಯ ಬಾಲಕ ಕೆಳಕ್ಕಿಳಿದ. ಈ ಬಾಲ ಚಾಲಕನನ್ನು ಕಂಡ ಪೊಲೀಸರೇ ಒಂದು ಕ್ಷಣ ಅವಕ್ಕಾದರು. ವಿಚಾರಣೆಗೊಳಪಡಿಸಿದಾಗ ಆತ ಕದ್ದೊಯ್ದಿರುವ ಸಂಗತಿಯನ್ನು ಬಾಯ್ಬಿಟ್ಟ.

ಆತನ ಗ್ರಾಮ ಇಟಾ ಜಿಲ್ಲೆಯ ಮಲವಾನ್ ಕದ್ದ ವಾಹನಗಳ ಮಾರುಕಟ್ಟೆಗೆ ಕುಖ್ಯಾತಿ ಪಡೆದಿದೆ. ಅಲ್ಲಿಗೆ ತಾನೂ ಲಾರಿ ತಂದು ಮಾರಾಟ ಮಾಡಿ ಹಣ ಮಾಡಲು ಹೊರಟಿದ್ದನಂತೆ ಈ ಬಾಲಕ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...