alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿಗೂ ಮುನ್ನ ಉಪವಾಸವಿದ್ರು ಕೆಲವರು: ಪ್ಲಾನ್ ಪ್ರಕಾರ ನಡೆದಿತ್ತು ಆತ್ಮಹತ್ಯೆ

ದೆಹಲಿ ಬುರಾರಿ ಆತ್ಮಹತ್ಯೆ ಪ್ರಕರಣ ಗಂಟೆಗೊಂದು ತಿರುವು ಪಡೆದುಕೊಳ್ತಿದೆ. ತನಿಖೆ ಮುಂದುವರೆದಂತೆ ಒಂದೊಂದೇ ಸಂಗತಿ ಹೊರ ಬರ್ತಿದೆ. ದೇಶದ ಜನರಲ್ಲಿ ಕುತೂಹಲ ಹೆಚ್ಚಾದ್ರೆ ತನಿಖೆ ನಡೆಸುತ್ತಿರುವ ಪೊಲೀಸರ ತಲೆನೋವು ಜಾಸ್ತಿಯಾಗಿದೆ.

ಆತ್ಮಹತ್ಯೆಗೂ ಮುನ್ನ ಅನೇಕರು ಉಪವಾಸವಿದ್ದರು ಎಂಬ ಸಂಗತಿ ಗೊತ್ತಾಗಿದೆ. ಲಲಿತ್ ಕೇವಲ 20 ರೊಟ್ಟಿಯನ್ನು ಹೊರಗಿನಿಂದ ತರಿಸಿದ್ದನಂತೆ. ಇದು ರಿಜಿಸ್ಟರ್ ನಲ್ಲಿ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಕೂಡ ಕೆಲವರು ಉಪವಾಸವಿದ್ದರು ಎಂಬ ಸಂಗತಿ ಗೊತ್ತಾಗಿದೆ.

ಮನೆಯಲ್ಲಿ ಸಿಕ್ಕ ರಿಜಿಸ್ಟರ್ ನಲ್ಲಿ ಸಾವಿನ ಬಗ್ಗೆ ಅನೇಕ ಪ್ಲಾನ್ ಗಳಿವೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನೇಣಿಗೆ ಶರಣಾಗಬೇಕು. ಅಜ್ಜಿ  ಬೇರೆ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬಹುದು ಎನ್ನುವುದ್ರಿಂದ ಹಿಡಿದು ಅನೇಕ ವಿಷ್ಯಗಳನ್ನು ಹೇಳಲಾಗಿದೆ. ರಾತ್ರಿ ಎಷ್ಟು ಗಂಟೆಗೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮಾಹಿತಿ ಕೂಡ ಇದೆ.

ಮನೆಯ ಹಿಂದೆ ಸಿಕ್ಕಿರುವ 11 ಪೈಪ್ ಗಳು ಕೂಡ ಸಾವಿನ ಬಗ್ಗೆ ಅನೇಕ ಅನುಮಾನ ಹುಟ್ಟಿಸಿವೆ. ಮನೆಯಲ್ಲಿ 11 ವ್ಯಕ್ತಿಗಳನ್ನು ಬಿಟ್ಟರೆ ಮತ್ಯಾರ ಫಿಂಗರ್ ಪ್ರಿಂಟ್ ಇಲ್ಲ. ಮನೆಗೆ ಬೇರೆಯವರು ಬಂದ ಮಾಹಿತಿಯೂ ಇಲ್ಲ. 15 ದಿನಗಳ ಹಿಂದೆ ಖುಷಿಯಲ್ಲಿ ಸಂಭ್ರಮಿಸಿದ್ದ ಕುಟುಂಬಕ್ಕೆ ಏನಾಯ್ತು ಎಂಬ ಪ್ರಶ್ನೆ ಕಾಡುತ್ತಿದೆ. ಯಾವುದೋ ಸನ್ಯಾಸಿ ಮಾತು ಕೇಳಿ ಕುಟುಂಬಸ್ಥರು ಹೀಗೆ ಮಾಡಿದ್ದಾರೆಂಬ ಮಾತುಗಳೂ ಕೇಳಿ ಬಂದಿವೆ. ಆದ್ರೆ ಆ ಸನ್ಯಾಸಿ ಯಾರು ಎಂಬುದು ಬಹಿರಂಗವಾಗಿಲ್ಲ. ಸಂಬಂಧಿಕರು ಮಾತ್ರ ಇದು ಆತ್ಮಹತ್ಯೆ ಅಥವಾ ಅಂಧವಿಶ್ವಾಸವಲ್ಲ, ಕೊಲೆ ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...