alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶದ ಹಳ್ಳಿಗಳಲ್ಲಿ ಹಿಂದಿ ಇ-ಮೇಲ್ ಐಡಿ

gmail

ನಿಮ್ಮ ಮೇಲ್ ಐಡಿಗೆ ಹಿಂದಿಯಲ್ಲಿ ಹೆಸರು ಇಡಲು ಯೋಚನೆ ಮಾಡಿದ್ದೀರಾ? ಕೇಂದ್ರ ಸರ್ಕಾರದ ಯೋಜನೆ ಯಶಸ್ವಿಯಾದ್ರೆ ಗೂಗಲ್, ಮೈಕ್ರೋಸಾಫ್ಟ್ ಹಾಗೂ ರೆಡಿಫ್ ನಂತಹ ಅಮೆರಿಕಾ ಮೂಲದ ಕಂಪನಿಗಳು ಆಯಾ ದೇಶಿಯ ಭಾಷೆಯಲ್ಲಿ ಇ ಮೇಲ್ ಐಡಿ ನೀಡಲಿವೆ.

ಕಳೆದ ತಿಂಗಳು ನಡೆದ ಸಭೆಯಲ್ಲಿ ಸರ್ಕಾರ ಇ ಮೇಲ್ ಸೇವೆ ಒದಗಿಸುವ ಕಂಪನಿಗಳ ಜೊತೆ ಮಾತುಕತೆ ನಡೆಸಿದೆ. ದೇಶಿಯ ಭಾಷೆಯಲ್ಲಿ ಅದರಲ್ಲೂ ಮುಖ್ಯವಾಗಿ ಹಿಂದಿ ಭಾಷೆಯಲ್ಲಿ ಇ ಮೇಲ್ ಸೌಲಭ್ಯ ನೀಡುವಂತೆ ಕೇಳಿದೆ. ಇಂಟರ್ ನೆಟ್ ಈಗ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಹಾಗಿರುವಾಗ ಅವರಿಗೆ ಅನುಕೂಲವಾಗುವ ಭಾಷೆಯಲ್ಲಿ ಮಾಹಿತಿ ನೀಡಬೇಕಾಗುತ್ತದೆ ಎಂಬುದು ಸರ್ಕಾರದ ಉದ್ದೇಶ.

ಮುಂದಿನ ಕೆಲ ವರ್ಷಗಳಲ್ಲಿ 25 ಸಾವಿರ ಗ್ರಾಮ ಪಂಚಾಯತಿಗಳು ನೆಟ್ ಪ್ರಾಜೆಕ್ಟ್ ಅಡಿಯಲ್ಲಿ ಬರಲಿವೆ. ದೇಶದಲ್ಲಿ ಅರ್ಧ ಜನರಿಗೆ ಇಂಗ್ಲೀಷ್ ಬರುವುದಿಲ್ಲ. ಹಾಗಿರುವಾಗ ನೆಟ್ ಇದ್ದರೂ ಏನು ಪ್ರಯೋಜನವಾಗುವುದಿಲ್ಲ. ಹಾಗಾಗಿ ಇ-ಮೇಲ್ ಅಡ್ರೆಸ್ಸನ್ನು ಹಿಂದಿಯಲ್ಲಿ ನೀಡುವಂತೆ ಕೇಳಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಮಾಹಿತಿ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...