alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರೇನ್ ನಿಂದ ಜಾರಿ ರಸ್ತೆಯಲ್ಲೇ ಬಿದ್ದ ವಿಮಾನ

crane-cash-7994ಹಾಳಾಗಿದ್ದ ವಿಮಾನವೊಂದನ್ನು ಕ್ರೇನ್ ಮೂಲಕ ವಿಮಾನ ನಿಲ್ದಾಣದಿಂದ ಹೊರ ಸಾಗಿಸುತ್ತಿದ್ದ ವೇಳೆ ಕ್ರೇನ್ ನಿಂದ ಜಾರಿ ರಸ್ತೆಯಲ್ಲೇ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲವೆಂದು ತಿಳಿದುಬಂದಿದೆ.

ಹೈದರಾಬಾದಿನ ಬೇಗಂ ಪೇಟ್ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಹಾಳಾಗಿದ್ದ ವಿಮಾನವೊಂದನ್ನು ತರಬೇತಿಯಲ್ಲಿ ಬಳಸಿಕೊಳ್ಳುವ ಸಲುವಾಗಿ ಮತ್ತೊಂದು ಜಾಗಕ್ಕೆ ಕ್ರೇನ್ ಮೂಲಕ ಸಾಗಿಸಲಾಗುತ್ತಿತ್ತು.

ನಿಲ್ದಾಣದಿಂದ ಸಲೀಸಾಗಿ ಕ್ರೇನ್ ಮೂಲಕ ವಿಮಾನವನ್ನು ಹೊರ ತರಲಾಗಿದ್ದು, ಬೋವನ್ ಪಲ್ಲಿ ಬಳಿ ಕ್ರೇನ್ ನಿಂದ ಜಾರಿ ವಿಮಾನ ಕೆಳಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ಹತ್ತಿರದಲ್ಲಿ ಯಾರೂ ಇರದಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಬಿದ್ದಿರುವ ವಿಮಾನವನ್ನು ಇದೀಗ ತೆರವುಗೊಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...