alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಕಮ್ಯುನಿಸ್ಟ್ ಶಾಸಕಿಯ ರಾಮಾಯಣ ಪಠಣದ ವಿಡಿಯೋ

ಜುಲೈ 17 ರಿಂದ ಕೇರಳದಲ್ಲಿ ಆರಂಭವಾಗಿರುವ ರಾಮಾಯಣ ಪಠಣದ ಮಾಸಾಚರಣೆ ರಾಜಕೀಯ ಜಿದ್ದಾಜಿದ್ದಿಗೂ ಕಾರಣವಾಗಿದೆ. ಕೇರಳದ ಸಿಪಿಐಎಂ ಪಾರ್ಟಿಯ ಶಾಸಕಿ ಪ್ರತಿಭಾ ಹರಿ, ರಾಮಾಯಣ ಪಠಿಸುತ್ತಿರುವ ವಿಡಿಯೋ ಈಗ ಕೇರಳದ ಎಡಪಂಥೀಯ ಸಂಘಟನೆಗಳಲ್ಲೇ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ.

ಕಾಯಕುಳಂ ಕ್ಷೇತ್ರದ ಶಾಸಕಿಯಾಗಿರುವ ಪ್ರತಿಭಾ ಹರಿ ಸೀರೆಯುಟ್ಟು ನೆಲದ ಮೇಲೆ ಶಿಸ್ತುಬದ್ಧವಾಗಿ ಕೂತು ರಾಮಾಯಣ ಪಠಿಸುತ್ತಿರುವ ವಿಡಿಯೋ ಒಂದನ್ನ ಇತ್ತೀಚೆಗಷ್ಟೇ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದರು.

ರಾಮಾಯಣ ಪಠಣದ ಮಾಸ ಆರಂಭವಾಗಿದೆ. ಎಲ್ಲರೂ ಧಾರ್ಮಿಕ ನಂಬಿಕೆಯನ್ನ ಪ್ರಚಾರ ಮಾಡಿ ಅನ್ನೋ ಸಂದೇಶವನ್ನೂ ವಿಡಿಯೋದ ಜೊತೆಗೆ ಪೋಸ್ಟ್ ಮಾಡಿದ್ದಾರೆ. ವಿಡಿಯೋವನ್ನ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಜನರು ಷೇರ್ ಮಾಡಿದ್ದಾರೆ.

ಇದರಿಂದಾಗಿ ಕೇರಳದಲ್ಲಿ ಈಗ ರಾಜಕೀಯದ ಪರ ವಿರೋಧ ಚರ್ಚೆಗಳು ಶುರುವಾಗಿದೆ. ಎಡಪಂಥೀಯ ಸಂಘಟನೆಗಳು ಬಿಜೆಪಿ ಮತ್ತು ಆರ್ ಎಸ್ ಎಸ್ ಗೆ ಟಾಂಗ್ ನೀಡೋದಕ್ಕಂತಾನೇ ಆಯೋಜಿಸಿದ್ದ ರಾಮಾಯಣ ಸೆಮಿನಾರ್ನ ತಯಾರಿಯೂ ಇದಾಗಿದೆ ಅಂತ ಪ್ರತಿಭಾ ಹರಿ ಅಭಿಪ್ರಾಯ ಪಟ್ಟಿದ್ದಾರೆ. ಎಡಪಂಥೀಯ ಸಂಘಟನೆಗಳಿಗೆ ಧಾರ್ಮಿಕ ಭಾವನೆ ಮತ್ತು ಶ್ರದ್ಧೆ ಎಷ್ಟರ ಮಟ್ಟಿಗೆ ಇದೆ ಅನ್ನೋದು ಇಡೀ ರಾಷ್ಟ್ರಕ್ಕೆ ಗೊತ್ತಿದೆ ಅನ್ನೋ ಅಭಿಪ್ರಾಯವನ್ನ ಕೇರಳದ ಬಿಜೆಪಿ ವ್ಯಕ್ತಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...