alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ ಘಟನೆ…! ಚಿರತೆಯನ್ನೇ ಇರಿದು ಕೊಂದ ಹಸು

ಮಹಾರಾಷ್ಟ್ರದ ಔರಂಗಾಬಾದ್ ನ ಗೌಟಾಲಾ ಅಭಯಾರಣ್ಯದ ವ್ಯಾಪ್ತಿಯಲ್ಲಿ ವಿಚಿತ್ರ ಘಟನೆ ನಡೆದಿದೆ. ಹಸುವಿನಿಂದ ದಾಳಿಗೆ ಒಳಗಾಗಿದ್ದ ಚಿರತೆಯೊಂದು ಸಾವನ್ನಪ್ಪಿರುವ ವಿಚಾರವನ್ನು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಗೌಟಾಲಾ ಅಭಯಾರಣ್ಯ ವ್ಯಾಪ್ತಿಯ ಬಂಬರ್ವಾಡಿ ಶಿವಾರ್ ಬಳಿ ಆಹಾರ ಅರಸಿ ಬಂದ ಚಿರತೆ ಕರುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಈ ಸಂದರ್ಭದಲ್ಲಿ ಕೋಪಗೊಂಡ ಹಸುವೊಂದು ತನ್ನ ಕೊಂಬುಗಳಿಂದಲೇ ಚಿರತೆಯನ್ನ ಎತ್ತಿ ಬಿಸಾಡಿದ್ದರಿಂದ ಚಿರತೆ ತೀವ್ರವಾಗಿ ಗಾಯಗೊಂಡಿತ್ತು.

ಬೆನ್ನು ಮೂಳೆ ಮುರಿತ ಮತ್ತು ಆಂತರಿಕ ರಕ್ತಸ್ರಾವಕ್ಕೆ ಒಳಗಾಗಿದ್ದ ಚಿರತೆಗೆ ಅಭಯಾರಣ್ಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆಯಲ್ಲಿ ಚಿರತೆ ಸಾವನ್ನಪ್ಪಿದೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...