alex Certify
ಕನ್ನಡ ದುನಿಯಾ       Mobile App
       

Kannada Duniya

ಹಸುಗಳ ರಕ್ಷಣೆಗೆ ಅಮೆರಿಕಾ ಮಹಿಳೆ ಮಾಡಿದ್ದೇನು..?

cow

ಅನೇಕ ಭಾರತೀಯರ ಕನಸು ಅಮೆರಿಕಾ. ಅಲ್ಲಿ ಸುಂದರ ಬದುಕು ಕಟ್ಟಿಕೊಂಡು ಭಾರತವನ್ನು ತೆಗಳುತ್ತ ಜೀವನ ಸಾಗಿಸ್ತಾರೆ ಕೆಲವರು. ಆದ್ರೆ ಈ ಅನಿವಾಸಿ ಭಾರತೀಯಳು ಮಾತ್ರ ಇವರೆಲ್ಲರಿಗಿಂತ ಭಿನ್ನವಾಗಿ ನಿಲ್ತಾಳೆ. ಅಮೆರಿಕಾದ ಸುಖ ತೊರೆದು ಭಾರತಕ್ಕೆ ಬಂದಿರುವ ಮಹಿಳೆ ಗೋ ರಕ್ಷಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ.

ಗುಜರಾತ್ ನ ವಡೋದರಾದ ಅನಿವಾಸಿ ಭಾರತೀಯಳಾದ ಶೀತಲ್ ಪಾರೀಖ್ ಭಾರತಕ್ಕೆ ಬಂದಿದ್ದಾಳೆ. ಶೀತಲ್ ಚಿಕ್ಕವಳಿರುವಾಗ  ಹಸು ಹಾಗೂ ನಮ್ಮ ಸಂಸ್ಕೃತಿಯಲ್ಲಿ ಅದಕ್ಕಿರುವ ಮಹತ್ವದ ಬಗ್ಗೆ ಓದಿದ್ದರಂತೆ.ಅವರ ತಂದೆ ಆಯುರ್ವೇದಿಕ್ ಪಂಡಿತರು. ಅವರು ಕೂಡ ಹಸುವಿನ ಮಹತ್ವದ ಬಗ್ಗೆ ಹೇಳಿದ್ದರಂತೆ. ಆದ್ರೆ ಇತ್ತೀಚೆಗೆ ಭಾರತದಲ್ಲಿ ಹಸುವನ್ನು ನಿರ್ಲಕ್ಷಿಸಲಾಗ್ತಿದೆ. ಮುದಿ ಹಸುವನ್ನು ಕಸಾಯಿ ಖಾನೆಗೆ ನೀಡಲಾಗ್ತಿದೆ ಎಂಬುದನ್ನರಿತ ಶೀತಲ್ ಹಸುಗಳ ರಕ್ಷಣೆಗಾಗಿಯೇ ಭಾರತಕ್ಕೆ ಬಂದಿದ್ದಾರೆ.

ಮುದಿ ಹಸುಗಳ ರಕ್ಷಣೆ ಮಾಡುವ ವಲ್ಲಭ ಯುವ ಜನ ಸಂಘಟನೆ ಜೊತೆ ಮೊದಲು ಶೀತಲ್ ಕೈ ಜೋಡಿಸಿದ್ದರು. ಅಮೆರಿಕಾದಲ್ಲಿ ಕುಳಿತುಕೊಂಡು ಹಸುಗಳ ರಕ್ಷಣೆ ಮಾಡುವುದು ಕಷ್ಟವಾಗಿತ್ತು. ಹಾಗಾಗಿ ಭಾರತಕ್ಕೆ ಬಂದೆ ಎನ್ನುತ್ತಾರೆ ಶೀತಲ್. ಹಾಲು ನೀಡದ ಮುದಿ ಹಸುಗಳನ್ನು ನಾವು ರಕ್ಷಣೆ ಮಾಡ್ತೇವೆ. ಅದನ್ನು ಗೋಧ್ರಾ ಗೋಶಾಲೆಯಲ್ಲಿ ಸಲಹುತ್ತೇವೆ ಹಸು ಬದುಕಿರುವವರೆಗೆ ಆಹಾರ ಹಾಗೂ ಔಷಧಿ ನೀಡುತ್ತೇವೆ. ನಾವು ಈವರೆಗೆ 60 ಹಸುಗಳನ್ನು ರಕ್ಷಿಸಿದ್ದೇವೆ. 500 ಇಂತ ಹಸುಗಳನ್ನು ರಕ್ಷಿಸುವ ಗುರಿ ಹೊಂದಿದ್ದೇವೆ ಎನ್ನುತ್ತಾರೆ ಶೀತಲ್. ಇದೇ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಗೋ ಕಾಳಜಿಯನ್ನು ಶೀತಲ್ ಹೊಗಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...