alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಣದ ಮಾಂಸದ ಹೆಸರಿನಲ್ಲಿ ರಫ್ತಾಗ್ತಿದೆ ಗೋಮಾಂಸ

ದೇಶದಲ್ಲಿ ಗೋಮಾಂಸ ನಿಷೇಧಿಸಲಾಗಿದೆ. ಇದ್ರ ಹೊರತಾಗಿಯೂ ಕೋಣದ ಮಾಂಸ (ಬಫೆಲೋ) ಹೆಸರಿನಲ್ಲಿ ಗೋಮಾಂಸವನ್ನು ರಫ್ತು ಮಾಡಲಾಗ್ತಿದೆ. ಬಿಹಾರ, ಮಹಾರಾಷ್ಟ್ರ, ಜಾರ್ಖಂಡ ಹಾಗೂ ತೆಲಂಗಾಣದಲ್ಲಿ ಎಫ್ಐಆರ್ ದಾಖಲಾಗಿದ್ದು, ಪ್ರಕರಣ ಬೆಳಕಿಗೆ ಬಂದಿದೆ.

ಎಕನಾಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಕನಿಷ್ಠ ಐದು ರಾಜ್ಯಗಳಲ್ಲಿ ನಕಲಿ ಹೆಸರಿನಲ್ಲಿ ಗೋಮಾಂಸ ಮಾರಾಟ ಮಾಡಲಾಗ್ತಿದೆ. ಎರಡು ತಿಂಗಳಲ್ಲಿ ಸುಮಾರು 1,011 ಟನ್ ಗೋಮಾಂಸವನ್ನು ವಶಕ್ಕೆ ಪಡೆಯಲಾಗಿದೆ. ಇದ್ರ ಬೆಲೆ ಸುಮಾರು 16 ಕೋಟಿ ಎಂದು ಅಂದಾಜಿಸಲಾಗಿದೆ.

ವಿಶ್ವದಲ್ಲಿಯೇ ಭಾರತ ಗೋಮಾಂಸ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿತ್ತು. ಆದ್ರೀಗ ದೇಶದಲ್ಲಿ ಗೋಮಾಂಸ ನಿಷೇಧಿಸಲಾಗಿದೆ. ಗೋಮಾಂಸ ವ್ಯಾಪಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗ್ತಿದೆ. ಸಾಮಾನ್ಯವಾಗಿ ವಿದೇಶಕ್ಕೆ ಮಾಂಸ ರಫ್ತು ಮಾಡುವಾಗ ಮೂರು ವರದಿಗಳನ್ನು ನೀಡಬೇಕಾಗುತ್ತದೆ. ಪ್ರಾಣಿಗಳ ಆರೋಗ್ಯಕ್ಕೆ ಸಂಬಂಧಿಸಿದ ವರದಿ, ಪೋಸ್ಟ್ ಮಾರ್ಟಂ ವರದಿ ಹಾಗೂ ಮಾಂಸದ ಬಗ್ಗೆ ಪ್ರಯೋಗಾಲಯದ ವರದಿಯನ್ನು ನೀಡಬೇಕಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...