alex Certify
ಕನ್ನಡ ದುನಿಯಾ       Mobile App
       

Kannada Duniya

90 ಲಕ್ಷಕ್ಕೂ ಹೆಚ್ಚು ಹಸುಗಳಿಗೆ ಸಿಕ್ತು ಹಳದಿ ಕಾರ್ಡ್

ಮಧ್ಯಪ್ರದೇಶದ 90 ಲಕ್ಷ ಹಸುಗಳು ಸೇರಿದಂತೆ 2.5 ಲಕ್ಷ ಜಾನುವಾರುಗಳು ತಮ್ಮದೆ ಆದ ಗುರುತು ಹೊಂದಿವೆ. ಅವುಗಳ ಕಿವಿಗಳಿಗೆ ಹಳದಿ ಕಾರ್ಡ್ ಟ್ಯಾಗ್ ಮಾಡಲಾಗಿದೆ. ಆಧಾರ್ ನಂತೆ ಜಾನುವಾರುಗಳಿಗೆ 12 ಡಿಜಿಟಲ್ ನಂಬರ್ ಗಳನ್ನು ನೀಡಲಾಗಿದೆ. ಆನ್ಲೈನ್ ನಲ್ಲಿ ಅವುಗಳ ಜಾತಕ ಸಿದ್ಧವಾಗ್ತಿದೆ.

ಜಾನುವಾರುಗಳ ಕಳ್ಳ ಸಾಗಣೆ ಹಾಗೂ ಜಾನುವಾರುಗಳನ್ನು ಬೀದಿಗೆ ಬಿಡುವ ಪದ್ಧತಿ ತಪ್ಪಿಸಲು ಇದು ನೆರವಾಗಲಿದೆ. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಮಹತ್ವದ ಯೋಜನೆ ಇದಾಗಿದೆ. ಈ ಯೋಜನೆ ಮೂಲಕ ದೇಶದಾದ್ಯಂತ ಜಾನುವಾರುಗಳಿಗೆ 12 ಡಿಜಿಟ್ ನಂಬರ್ ನೀಡಲಾಗ್ತಿದೆ.

ಮೊದಲ ಹಂತದಲ್ಲಿ ರಾಜ್ಯದಲ್ಲಿ 40 ಲಕ್ಷ ಟ್ಯಾಗ್ ಗಳನ್ನು ವಿತರಿಸಲಾಗಿದೆ. ಪ್ರಾಣಿಗಳ ವಯಸ್ಸು, ಆರೋಗ್ಯ, ಕೃತಕ ಗರ್ಭದಾರಣೆ, ಹಾಲು ಕರೆಯುವ ಸಾಮರ್ಥ್ಯ ಸೇರಿದಂತೆ ಎಲ್ಲ ವಿವರಗಳು  ಆನ್ಲೈನ್ ನಲ್ಲಿ ಅಪ್ಡೇಟ್ ಆಗಲಿದೆ. ಜಾನುವಾರುಗಳಿಗೆ ನೀಡಿರುವ ಡಿಜಿಟಲ್ ನಂಬರ್ ಟೈಪ್ ಮಾಡಿದಲ್ಲಿ ಜಾನುವಾರುವಿನ ಎಲ್ಲ ವಿವರ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...