alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಎದುರೇ ಮೂತ್ರ ವಿಸರ್ಜನೆ

urinels

ನೇಚರ್ ಕಾಲ್ ಬಂದಾಗ ತಡೆದುಕೊಳ್ಳಲು ಆಗಲ್ಲ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಇಲ್ಲೊಬ್ಬನಿಗೆ ಮೂತ್ರ ವಿಸರ್ಜನೆಗೆ ಸಿಕ್ಕಾಪಟ್ಟೆ ಅವಸರವಾಗಿದೆ. ಆದರೆ, ಎಲ್ಲೂ ಜಾಗ ಸಿಗದ ಕಾರಣ, ಟೀ ಅಂಗಡಿ ಎದುರಿಗೆ
ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ.

ಈ ಪುಣ್ಯಾತ್ಮ ಬೇಕಂತಲೆ ತನ್ನ ಎದುರಿಗೆ ಮೂತ್ರ ವಿಸರ್ಜನೆ ಮಾಡಿರಬಹುದೆಂದು ಭಾವಿಸಿದ ಟೀ ಅಂಗಡಿ ಮಹಿಳೆ, ಸರಿಯಾಗಿಯೇ ಪಾಠ ಕಲಿಸಲು ಮುಂದಾಗಿದ್ದಾಳೆ. ಕೊನೆಗೆ ತನ್ನೆದುರಿಗೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿಯ ವಿರುದ್ಧ ನ್ಯಾಯಾಲಯಕ್ಕೆ ದೂರು ಕೂಡ ನೀಡಿದ್ದಾಳೆ. ಅಂದ ಹಾಗೇ ಘಟನೆ ನಡೆದಿದ್ದು, ಅಹಮದಾಬಾದ್ ನಲ್ಲಿ. ಗೋರೆ ಎಂಬಾತ ಪರಿಚಯಸ್ಥರೊಬ್ಬರನ್ನು ನೋಡಲು ಆಸ್ಪತ್ರೆಗೆ ಹೋಗಿದ್ದು, ಅಲ್ಲಿ ಮೂತ್ರ ವಿಸರ್ಜನೆಗೆ ಅರ್ಜೆಂಟಾಗಿದೆ. ಪಕ್ಕದಲ್ಲೇ ಇದ್ದ ಬಯಲಿನಲ್ಲಿ ಅವರು ಮೂತ್ರ ವಿಸರ್ಜನೆ ಮಾಡಿದ್ದರು.

ಮಹಿಳೆ ದೂರು ನೀಡಿದ್ದರಿಂದ ವಿಚಾರಣೆ ನಡೆಸಿದ ನ್ಯಾಯಾಲಯ, ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುವುದು ಸರಿಯಾದ ನಡವಳಿಕೆಯಲ್ಲ, ಆದರೆ, ಇದರಿಂದ ಮಹಿಳೆಯ ಗೌರವಕ್ಕೆ ಧಕ್ಕೆಯೇನೂ ಆಗಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...