alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ನೂ ಹಾಗೇ ಇದೆ ಸುನಂದಾ ಪುಷ್ಕರ್ ಮೃತಪಟ್ಟ ರೂಂ

sunanda-p

ನವದೆಹಲಿ: ಕಾಂಗ್ರೆಸ್ ಲೀಡರ್, ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿಗೀಡಾಗಿದ್ದ ಹೋಟೆಲ್ ನ ರೂಂ ಇನ್ನೂ ಹಾಗೆಯೇ ಇದೆ.

ತನಿಖೆಗಾಗಿ ಕೊಠಡಿಯನ್ನು ಜಪ್ತಿ ಮಾಡಿದ್ದ ಪೊಲೀಸರು ಇನ್ನೂ ಬಿಟ್ಟು ಕೊಟ್ಟಿಲ್ಲ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಕೋರ್ಟ್ 4 ವಾರದೊಳಗೆ ಜಪ್ತಿ ತೆರವಿಗೆ ಆದೇಶಿಸಿದೆ.

3 ವರ್ಷಗಳ ಹಿಂದೆ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ರೂಂ ನಂ. 345 ರಲ್ಲಿ ಸುನಂದಾ ಪುಷ್ಕರ್ ಶವವಾಗಿ ಪತ್ತೆಯಾಗಿದ್ದು, ತನಿಖೆ ಕೈಗೊಂಡಿದ್ದ ದೆಹಲಿ ಪೊಲೀಸರು ಕೊಠಡಿಯನ್ನು ಜಪ್ತಿ ಮಾಡಿದ್ದರು. ಆದರೆ  ಹೋಟೆಲ್ ನ ಆಡಳಿತ ಮಂಡಳಿ ಹಲವು ಬಾರಿ ಮನವಿ ಮಾಡಿದ್ದರೂ ಪೊಲೀಸರು ಜಪ್ತಿ ತೆರವುಗೊಳಿಸಿರಲಿಲ್ಲ. ಆಡಳಿತ ಮಂಡಳಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. 4 ವಾರದೊಳಗೆ ಜಪ್ತಿಯನ್ನು ತೆರವುಗೊಳಿಸಿ, ಕೊಠಡಿಯನ್ನು ಆಡಳಿತ ಮಂಡಳಿಗೆ ವಹಿಸಬೇಕೆಂದು ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...