alex Certify
ಕನ್ನಡ ದುನಿಯಾ       Mobile App
       

Kannada Duniya

ಅಹಮದಾಬಾದ್ ನಲ್ಲೊಂದು ವಿಚಿತ್ರ ಪ್ರೇಮ್ ಕಹಾನಿ

ಅಹಮದಾಬಾದ್ ನಲ್ಲಿ ಫಾರ್ಮಾಸಿಸ್ಟ್ ಒಬ್ಬಳು ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಯುವಕನನ್ನೇ ಮದುವೆಯಾಗಿದ್ದಳು. ಆತ ಕೂಡ ಫಾರ್ಮಾಸಿಸ್ಟ್. ಮದುವೆ ನಂತರವೂ ಕುಟುಂಬದವರ ಕಾಟ ಕಡಿಮೆಯಾಗಿರಲಿಲ್ಲ. ಹಾಗಾಗಿ ಒಂದು ವರ್ಷದೊಳಗೆ ಆತನಿಗೆ ವಿಚ್ಛೇದನ ನೀಡಿದ್ದಳು.

ಅದಾದ್ಮೇಲೆ ಮತ್ತೆ ಅವನನ್ನೇ ಮದುವೆಯಾಗಿದ್ದಾಳೆ. ಆದ್ರೀಗ ಪತಿಯ ನಡವಳಿಕೆ ಸರಿಯಾಗಿಲ್ಲ ಅನ್ನೋ ಕಾರಣಕ್ಕೆ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. 2016ರ ನವೆಂಬರ್ ನಲ್ಲಿ ಮದುವೆಯಾಗಿದ್ದ ಈ ಜೋಡಿ ಈ ವರ್ಷ ಜೂನ್ ನಲ್ಲಿ ವಿಚ್ಛೇದನ ಪಡೆದಿತ್ತು. ಮತ್ತೆ ಆಗಸ್ಟ್ ನಲ್ಲಿ ಇಬ್ಬರೂ ಮದುವೆ ಮಾಡಿಕೊಂಡಿದ್ದಾರೆ.

ಈ ಬಾರಿ ಯುವತಿಯ ತಂದೆ ಮದುವೆಯನ್ನು ವಿರೋಧಿಸಿರಲಿಲ್ಲ. ಬದಲಾಗಿ ಅವರನ್ನು ಮನೆಗೆ ಆಹ್ವಾನಿಸಿದ್ದ. ಆದ್ರೆ ಮಗಳು ಅಳಿಯ ಮನೆಗೆ ಬರ್ತಿದ್ದಂತೆ ಮತ್ತದೇ ವರಸೆ ಶುರು ಮಾಡಿದ್ದಾರೆ. ಮಗಳನ್ನು ಹುಟ್ಟೂರಿಗೆ ಕರೆದುಕೊಂಡು ಹೋಗಲು ಪ್ಲಾನ್ ಕೂಡ ಮಾಡಿದ್ದರು.

ಅಳಿಯನ ಫೋನ್ ಕಸಿದುಕೊಂಡು, ಚೆನ್ನಾಗಿ ಥಳಿಸಿ ಅವನನ್ನು ಮನೆಯಲ್ಲಿ ಕೂಡಿ ಹಾಕಿ ಬೇರೆ ಊರಿಗೆ ಮಗಳನ್ನು ಕರೆದುಕೊಂಡು ಹೊರಟು ಹೋಗಿದ್ದರು. ಕೊನೆಗೆ ಅಕ್ಕಪಕ್ಕದ ಮನೆಯವರು ಬಾಗಿಲು ಒಡೆದು ಯುವಕನನ್ನು ರಕ್ಷಿಸಿದ್ದಾರೆ. ತನ್ನ ಪತ್ನಿಯನ್ನು ಹುಡುಕಿಕೊಡುವಂತೆ ಆತ ಹೇಬಿಯಸ್ ಕಾರ್ಪಸ್ ಕೂಡ ಸಲ್ಲಿಸಿದ್ದ.

ಕೋರ್ಟ್ ಆದೇಶದಂತೆ ಪೊಲೀಸರು ಅವಳನ್ನು ಹಾಜರುಪಡಿಸಿದ್ರು. ಈ ವೇಳೆ ಯುವತಿ ತನ್ನ ಗಂಡನೊಂದಿಗೆ ಮಾತನಾಡಲು ಕೂಡ ನಿರಾಕರಿಸಿದ್ದಾಳೆ. ಆತ ತನ್ನೊಂದಿಗೆ ಕೆಟ್ಟದಾಗಿ ವರ್ತಿಸ್ತಾನೆ ಹಾಗಾಗಿ ಹೆತ್ತವರೊಂದಿಗೇ ಇರುತ್ತೇನೆ ಅಂತಾ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...