alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಮಿ ಜೊತೆ ಸಿಕ್ಕಿಬಿದ್ದ ಪತ್ನಿ ನಿರ್ವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಪತಿ

ರಾಜಸ್ತಾನದ ಉದಯ್ಪುರದಲ್ಲಿ ನಾಚಿಕೆಗೇಡಿ ಕೆಲಸ ನಡೆದಿದೆ. ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಪ್ರೇಮಿಗಳಿಗೆ ದಂಗಾಗಿಸುವ ಶಿಕ್ಷೆ ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೀಡಿತ ಮಹಿಳೆ ಮಾಜಿ ಪತಿ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಉದಯ್ಪುರ ಠಾಣಾ ವ್ಯಾಪ್ತಿಯ ಸರ್ರೆ ಪ್ರದೇಶದಲ್ಲಿ ಘಟನೆ ನಡೆದಿದೆ. ಮಹಿಳೆ ಹಾಗೂ ಆಕೆ ಪ್ರೇಮಿಯನ್ನು ನಿರ್ವಸ್ತ್ರಗೊಳಿಸಿ ಊರಿನಲ್ಲಿ ಮೆರವಣಿಗೆ ಮಾಡಲಾಗಿದೆ. ಮಹಿಳೆ ಮಾಜಿ ಪತಿಯೇ ಈ ಕೃತ್ಯವೆಸಗಿದ್ದಾನೆ. ಪೀಡಿತ ಮಹಿಳೆ ಎರಡು ಬಾರಿ ಮದುವೆಯಾಗಿದ್ದಳು ಎನ್ನಲಾಗಿದೆ.

ಮಹಿಳೆ ಪ್ರೇಮಿ ಜೊತೆಗಿದ್ದಾಳೆಂಬ ಸುದ್ದಿ ತಿಳಿದ ಮಾಜಿ ಪತಿ ಸ್ನೇಹಿತರ ಜೊತೆ ಸೇರಿ ಮಹಿಳೆ ಹಾಗೂ ಆಕೆ ಪ್ರೇಮಿಗೆ ಹೊಡೆದಿದ್ದಾನೆ. ನಂತ್ರ  ನಿರ್ವಸ್ತ್ರಗೊಳಿಸಿ ಕೈ ಕಟ್ಟಿ ಊರಿನ ತುಂಬ ಮೆರವಣಿಗೆ ಮಾಡಿದ್ದಾನೆ. ಗ್ರಾಮಸ್ಥರು ಮೂಕ ಪ್ರೇಕ್ಷಕರಂತೆ ಘಟನೆಯನ್ನು ನೋಡುತ್ತ ನಿಂತಿದ್ದರು. ಕೆಲವರು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ವಿಡಿಯೋ ಮಾಡಿದವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...