alex Certify
ಕನ್ನಡ ದುನಿಯಾ       Mobile App
       

Kannada Duniya

ಜೀನ್ಸ್ ಧರಿಸಿದ್ದ ಯುವತಿಗೆ ರೈಲಿನಲ್ಲಿ ಆಗಿದ್ದೇನು…?

ಪಶ್ಚಿಮ ಬಂಗಾಳದ ಸಬರ್ಬನ್ ರೈಲು ಪ್ರಯಾಣದ ವೇಳೆ ಯುವತಿಯೊಬ್ಬಳು ಸಹ ಪ್ರಯಾಣಿಕರಿಂದ ಕಿರುಕುಳ ಅನುಭವಿಸಿದ ಘಟನೆ ನಡೆದಿದೆ.

ಯುವತಿಯೊಬ್ಬಳು ತನ್ನ ಸ್ನೇಹಿತನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು. ಆ ವೇಳೆಯಲ್ಲಿ ರೈಲಿನಲ್ಲಿದ್ದ ಕಿಡಿಗೇಡಿಗಳು ಆಕೆಯ ಬಟ್ಟೆಯ ಮೇಲೆ ಅಸಭ್ಯವಾದ ಕಾಮೆಂಟ್ ಗಳನ್ನ ಮಾಡಿ ನಿಂದಿಸಿದ್ದಾರೆ.

ಕಿರುಕುಳಕ್ಕೊಳಗಾದ ಯುವತಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದರಿಂದ ತನ್ನ ಸ್ನೇಹಿತನೊಂದಿಗೆ ಜನರಲ್ ಕಂಪಾರ್ಟ್ಮೆಂಟ್ನಲ್ಲಿ ಪ್ರಯಾಣಿಸುತ್ತಿದ್ದಳು. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಜೀನ್ಸ್ ಧರಿಸಿದ್ದಳು ಅನ್ನೋ ಕಾರಣಕ್ಕೆ ಆ ಜೋಡಿಯನ್ನ ಕಿಡಿಗೇಡಿಗಳು ಬೈದಿದ್ದಾರೆ. ಅಷ್ಟೇ ಅಲ್ಲ ಆಕೆಯ ಮೈಮುಟ್ಟಿ ಎಳೆದಾಡಿದ್ದಾರೆ. ಈ ಸಂಬಂಧ ಅವರಿಬ್ಬರು ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೇ ಪೊಲೀಸರು, ಆರೋಪಿಗಳ ಗುರುತು ಪತ್ತೆಗೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...