alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತು ಬರಿಸುವ ಟೀ ನೀಡಿ ದಂಪತಿಗಳ ಚಿನ್ನಾಭರಣ ದರೋಡೆ

train

ಮಧುರೈ: ಮುಂಬೈ- ಕನ್ಯಾಕುಮಾರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮುಂಬೈನಿಂದ ತಮಿಳುನಾಡಿನ ಮಧುರೈಗೆ ಬರುತ್ತಿದ್ದ ದಂಪತಿಗಳಿಗೆ ಮತ್ತು ಬರಿಸುವ ಟೀ ನೀಡಿ ಅವರುಗಳು ಪ್ರಜ್ಞೆ ತಪ್ಪಿದ ಬಳಿಕ ಬೆಲೆ ಬಾಳುವ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ನಡೆದಿದೆ.

ಈ ದಂಪತಿಗಳು ರೈಲಿನಲ್ಲಿ ಟೀ ಮಾರಾಟ ಮಾಡಲು ಬಂದವನೊಬ್ಬನ ಬಳಿ ಟೀ ತೆಗೆದುಕೊಂಡು ಕುಡಿದಿದ್ದು, ಬಳಿಕ ಪ್ರಜ್ಞೆ ತಪ್ಪಿದ್ದಾರೆ. ಈ ಸಂದರ್ಭದಲ್ಲಿ ಅವರ ಬಳಿಯಿದ್ದ ಹಣ ಸೇರಿದಂತೆ ಬೆಲೆ ಬಾಳುವ ಚಿನ್ನಾಭರಣವನ್ನು ದೋಚಿಕೊಂಡು ಹೋಗಲಾಗಿದೆ.

ದಂಪತಿಗಳನ್ನು ಬರ ಮಾಡಿಕೊಳ್ಳಲು ಅವರ ಸಂಬಂಧಿಯೊಬ್ಬ ಮಧುರೈ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದು, ರೈಲು, ನಿಲ್ದಾಣಕ್ಕೆ ಬಂದರೂ ಇಳಿಯದ ಕಾರಣ ಪದೇ ಪದೇ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆಗ ಮತ್ತೊಬ್ಬ ಪ್ರಯಾಣಿಕರು ಫೋನ್ ರಿಸೀವ್ ಮಾಡಿ ದಂಪತಿಗಳು ಪ್ರಜ್ಞೆ ತಪ್ಪಿರುವ ವಿಷಯ ತಿಳಿಸಿದ್ದಾರೆ.

ಅಷ್ಟರಲ್ಲಾಗಲೇ ರೈಲು ಚಲಿಸಿದ್ದ ಕಾರಣ ದಂಪತಿಗಳ ಸಂಬಂಧಿ, ಮುಂದಿನ ರೈಲು ನಿಲ್ದಾಣದ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದು, ಅವರುಗಳು ಕೂಡಲೇ ಧಾವಿಸಿ ಪ್ರಜ್ಞಾಶೂನ್ಯರಾಗಿದ್ದ ದಂಪತಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರೈಲಿನಲ್ಲಿ ಅನಧಿಕೃತವಾಗಿ ಟೀ ಮಾರಾಟ ಮಾಡುತ್ತಿದ್ದವನೇ ಈ ಕೃತ್ಯ ಎಸಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...