alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆಯಲ್ಲೇ ತಬ್ಬಿಕೊಂಡ ಜೋಡಿ : ಆಗಿದ್ದೇನು..?

thane-d

ಭಿವಂಡಿ: ಯುವ ಜೋಡಿಯೊಂದು ಮಟಮಟ ಮಧ್ಯಾಹ್ನ ನಡು ರಸ್ತೆಯಲ್ಲೇ, ತಬ್ಬಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದರಿಂದ ಸಮುದಾಯದ ಕೆಲವರು ಕೆರಳಿದ್ದು, ಜನನಿಬಿಡ ಸ್ಥಳದಲ್ಲೇ ಈ ರೀತಿ ವರ್ತಿಸಿದ ಯುವಕ, ಯುವತಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಯುವಕ ಹಾಗೂ ಯುವತಿ ನಡುವೆ ಪ್ರೀತಿ ಬೆಳೆದಿದ್ದು, ನಡು ರಸ್ತೆಯಲ್ಲೇ ಪ್ರಪೋಸ್ ಮಾಡಿ ಅಪ್ಪಿಕೊಂಡಿದ್ದಾರೆ.

ಯುವಕನ ಗೆಳೆಯರು ಇದನ್ನು ವಿಡಿಯೋ ಮಾಡಿ, ಜಾಲತಾಣದಲ್ಲಿ  ಪೋಸ್ಟ್  ಮಾಡಿದ್ದು, ವೈರಲ್ ಆಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಲಾಗಿದೆ. ಬಳಿಕ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ದೂರು ನೀಡಲು ಮುಂದಾಗಿದ್ದಾರೆ.

ಈ ಬೆಳವಣಿಗೆಳಿಂದ ತಮ್ಮ ಪುತ್ರಿ ಬೇಸರವಾಗಿದ್ದಾಳೆ ಎಂದು ಆಕೆಯ ತಂದೆ ತಿಳಿಸಿದ್ದಾರೆ. ರಾಷ್ಟ್ರೀಯ ಲೋಕಹಿತ್ ಪಾರ್ಟಿ ಹಾಗೂ ರಜಾ ಅಕಾಡೆಮಿಯ ಪ್ರಮುಖರು ಯುವಕ, ಯುವತಿಯ ವರ್ತನೆಗೆ ಆಕ್ಷೇಪಿಸಿದ್ದಾರೆ.

ಯುವಕ ಕ್ಷಮೆ ಕೇಳಿರುವ ವಿಡಿಯೋ ಅಪ್ ಲೋಡ್ ಮಾಡಿದ್ದಾನೆ. ಯುವತಿಗೆ ಹಾಗೂ ಆಕೆಯ ಮನೆಯವರಿಗೆ ಯಾರಾದರೂ ಕಿರುಕುಳ ನೀಡಿದಲ್ಲಿ ಕ್ರಮ ಕೈಗೊಳ್ಳುವುದಾಗಿ ಥಾಣೆ ವಲಯ  ಡಿ.ಸಿ.ಪಿ. ಮನೋಜ್ ಪಾಟೀಲ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...