alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ-ಪತ್ನಿ ಸಾವಿಗೆ ಇದು ಕಾರಣವಾಯ್ತು

untitled_1_1503140885_618x347

ಛತ್ತೀಸ್ಗಢ ಹಾಗೂ ಮಧ್ಯಪ್ರದೇಶದ ಗಡಿಯ ಅಕಲತರಾ ಬ್ಲಾಕ್ ನಲ್ಲಿ ಸೇನೆಯ ಯೋಧನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ತಾನು ರೈಲಿಗೆ ತಲೆಯೊಡ್ಡಿದ್ದಾನೆ. ಆತ್ಮಹತ್ಯೆಗೂ ಮೊದಲು ಸೂಸೈಡ್ ನೋಟ್ ಬರೆದಿರುವ ಸೈನಿಕ ಸಾವಿಗೆ ಕಾರಣವೇನು ಎಂಬುದನ್ನು ತಿಳಿಸಿದ್ದಾನೆ.  ನನಗೆ ಸಾಕಷ್ಟು ರಜೆ ಸಿಗೋದಿಲ್ಲ. ಹಾಗಾಗಿ ನಾನು ಹಾಗೂ ನನ್ನ ಪತ್ನಿ ಆತ್ಮಹತ್ಯೆಗೆ ನಿರ್ಧರಿಸಿದ್ದೆವು ಎಂದು ಬರೆದಿದ್ದಾನೆ.

ಮೃತ ಸೈನಿಕನ ಹೆಸರು ಆಕಾಶ್ ಚಂದೇಲ್. ಆಕಾಶ್ ಹಾಗೂ ಬಬಿತಾ ಕಳೆದ 7 ತಿಂಗಳ ಹಿಂದೆ ಮದುವೆಯಾಗಿದ್ದರು. 10 ದಿನಗಳ ರಜೆ ಪಡೆದು ಆಕಾಶ್ ಅಕಲತರಾಗೆ ಬಂದಿದ್ದ. ಕಳೆದ ಎರಡು ದಿನಗಳಿಂದ ಪತಿ-ಪತ್ನಿ ನಡುವೆ ಗಲಾಟೆ ನಡೆದಿತ್ತಂತೆ. ನಿನ್ನೆ ಕಾರು ತೆಗೆದುಕೊಂಡು ರೈಲ್ವೆ ನಿಲ್ದಾಣಕ್ಕೆ ಹೋದ ಆಕಾಶ್ ರೈಲಿಗೆ ತಲೆಯೊಡ್ಡಿದ್ದಾನೆ.

ಸ್ಥಳಕ್ಕೆ ಬಂದ ಪೊಲೀಸರು ಆಕಾಶ್ ಬಳಿಯಿದ್ದ ಸೂಸೈಡ್  ನೋಟನ್ನು ವಶಕ್ಕೆ ಪಡೆದಿದ್ದಾರೆ. ನನಗೆ ರಜೆ ಸಿಕ್ತಿರಲಿಲ್ಲ. ಹಾಗಾಗಿ ಇಬ್ಬರೂ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡ್ವಿ. ಮೊದಲು ಬಬಿತಾ ಕುತ್ತಿಗೆ ಹಿಸುಕಿ ಕೊಲೆಗೈದೆ. ನಂತ್ರ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದ್ರಲ್ಲಿ ನಮ್ಮ ಮನೆಯವರ ತಪ್ಪಿಲ್ಲ ಎಂದು ಬರೆದಿದ್ದಾನೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...