alex Certify
ಕನ್ನಡ ದುನಿಯಾ       Mobile App
       

Kannada Duniya

ರಕ್ಷಣೆಗೆ ಧ್ವಜ ಬಳಸಿ ಜೈಲು ಸೇರಿದ ಪೋರ್ಟರ್….?

ಹಮಾಲಿಯೊಬ್ಬ ತನ್ನ ಮನೆಯವರನ್ನು ಸೂರ್ಯ ರಶ್ಮಿಯಿಂದ ರಕ್ಷಿಸಿಕೊಳ್ಳಲು ಮನೆ ಬಾಗಿಲಿಗೆ ಭಾರತ ಧ್ವಜ ಹಾಕಿ ಜೈಲು ಶಿಕ್ಷೆ ಅನುಭವಿಸಿರುವ ಘಟನೆ ಮುಜಾಫರ್ ನಗರದಲ್ಲಿ ನಡೆದಿದೆ.

ತೀವ್ರ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಹಮಾಲಿ ಶಾರುಖ್ ಮನೆಯಲ್ಲಿ ತಂದೆ, ಹೆಂಡತಿ ಹಾಗೂ ಇಬ್ಬರು ಮಕ್ಕಳು ಸೇರಿ ಐವರು ಜೀವನ ಸಾಗಿಸುತ್ತಿದ್ದು, ಯಾರೊಬ್ಬರು ಶಾಲೆಯ ಮೆಟ್ಟಿಲು ಏರಿಲ್ಲ.

ಮನೆಯ ಬಾಗಿಲು ಮುರಿದು ಹೋಗಿದ್ದರಿಂದ, ಬಿಸಿಲಿನಿಂದ ರಕ್ಷಣೆ ಪಡೆಯಲು ಸ್ವಾತಂತ್ರ್ಯ ದಿನಾಚರಣೆ ವೇಳೆ ಸಿಕ್ಕ ದೊಡ್ಡ ಧ್ವಜವನ್ನು ತಂದು, ತನ್ನ ಮನೆ ಬಾಗಿಲಿಗೆ ಹಾಕಿದ್ದ. ಇದನ್ನು ಗಮನಿಸಿದ ಶಿವಸೇನೆ ಕಾರ್ಯಕರ್ತರು ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಪೊಲೀಸ್ ಪ್ರಕರಣ ದಾಖಲಿಸಿದ್ದರು.‌ಇದೇ ವಿಚಾರವಾಗಿ ಸೆ.5 ರಂದು ಪೊಲೀಸರು ಬಂಧಿಸಿದ್ದರು.

ಸುಮಾರು ಒಂದು ವಾರದ ಬಳಿಕ ಸೆ.11 ರಂದು ಶಾರುಖ್ ಗೆ ಜಾಮೀನು ದೊರೆತಿದೆ ಎಂದು ತಿಳಿದುಬಂದಿದೆ. ಆದರೆ ಶಾರುಖ್ ತಂದೆ ಹಾಗೂ ಪತ್ನಿಯ ಪ್ರಕಾರ, ಧ್ವಜವನ್ನು ಈ ರೀತಿ ಹಾಕುವುದು ಅಪರಾಧವೆಂದು ನಮಗೆ ಗೊತ್ತಿಲ್ಲ. ಗೊತ್ತಿದ್ದರೆ ಖಂಡಿತ ಈ ರೀತಿ ಮಾಡುತ್ತಿರಲಿಲ್ಲ. ಮುರುಕು ಮನೆಯೊಳಗೆ ಬರುತ್ತಿದ್ದ ಬಿಸಿಲನ್ನು ತಡೆಯಲು ಈ ರೀತಿ ಮಾಡಿದ್ದೇವೆ ಎಂದರೆ, ಸ್ಥಳೀಯ ಶಿವಸೇನ ಮುಖ್ಯಸ್ಥರು, ಈ ರೀತಿಯ ಸಣ್ಣ ವಿಚಾರವೂ ತಿಳಿದಿಲ್ಲ ಎಂದರೆ ಅನುಮಾನ ಬರುತ್ತದೆ. ಯಾವುದೇ ಕಾರಣಕ್ಕೂ ದೇಶದ ಧ್ವಜಕ್ಕೆ ಧಕ್ಕೆಯಾಗುತ್ತದೆ ಎಂದರೆ ಅದನ್ನು ಸಹಿಸಿಕೊಂಡು ಕೂರುವುದಿಲ್ಲ ಎಂದಿದ್ದಾರೆ.

ಆದರೆ ಒಂದು ವಾರ ಶಾರುಖ್ ಜೈಲಿನಲ್ಲಿದ್ದರಿಂದ, ಮನೆಯಲ್ಲಿ ಅಡುಗೆ ಮಾಡಿಕೊಳ್ಳಲು ಸಾಮಾನಿಲ್ಲದೇ, ಖಾಲಿ ಹೊಟ್ಟೆಯಲ್ಲಿ ದಿನದೂಡಿದ್ದು ನೆರೆ-ಹೊರೆಯವರು ಊಟ ನೀಡಿದ್ದಾರೆ ಎಂದು ಮನೆಯವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...