alex Certify
ಕನ್ನಡ ದುನಿಯಾ       Mobile App
       

Kannada Duniya

ಚಹಾದ ಬೆಲೆ ಕೇಳಿ ಬೆಚ್ಚಿ ಬಿದ್ರು ಪಿ. ಚಿದಂಬರಂ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಚಹಾ ಕುಡಿಯಲು ಹೋದ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ದಂಗಾಗಿ ಹೋಗಿದ್ದಾರೆ. ಒಂದು ಕಪ್ ಚಹಾದ ಬೆಲೆ 135 ರೂಪಾಯಿ ಅನ್ನೋದನ್ನು ನೋಡಿ ಹೌಹಾರಿದ ಚಿದು, ಇದನ್ನು ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದಾರೆ.

ಅಲ್ಲಿ ಒಂದು ಕಪ್ ಕಾಫಿಯ ಬೆಲೆ 180 ರೂಪಾಯಿ. ಇಷ್ಟು ದುಬಾರಿಯಾದ್ರೂ ಎಲ್ಲರೂ ಅದೇ ಟೀ, ಕಾಫಿ ಕೊಂಡುಕೊಂಡು ಕುಡಿಯುತ್ತಿರೋದು ಅಚ್ಚರಿಯ ವಿಷಯ ಅಂತಾ ಚಿದಂಬರಂ ಟ್ವೀಟ್ ಮಾಡಿದ್ದರು.

ಟ್ವಿಟ್ಟರ್ ನಲ್ಲಿ ಚಿದಂಬರಂಗೆ ಹಲವರು ಟ್ರೋಲ್ ಮಾಡಿದ್ದಾರೆ. ನೀವು ಹಣಕಾಸು ಸಚಿವರಾಗಿದ್ದಾಗಲೂ ಚೆನ್ನೈ ಏರ್ ಪೋರ್ಟ್ ನಲ್ಲಿ ಟೀ-ಕಾಫಿ ಬೆಲೆ ಇಷ್ಟೇ ಇತ್ತು, ಆಗ ಯಾಕೆ ಟ್ವೀಟ್ ಮಾಡಿಲ್ಲ ಅಂತಾ ಪ್ರಶ್ನಿಸಿದ್ದಾರೆ.

ಮುಂದಿನ ಬಾರಿ ವಿಮಾನದ ಬದಲು ರೈಲಿನಲ್ಲಿ ಪ್ರಯಾಣ ಮಾಡಿ. ನೀರು, ಚಹಾ, ಕಾಫಿ ಎಲ್ಲವೂ ಅಗ್ಗದಲ್ಲಿ ಸಿಗುತ್ತದೆ ಅಂತಾ ಕಾಲೆಳೆದಿದ್ದಾರೆ. ಇದೇ ಮೊದಲ ಬಾರಿಗೆ ದುಡ್ಡು ಕೊಟ್ಟು ಚಹಾ ಖರೀದಿಸಿರಬೇಕು ಅಂತಾ ಲೇವಡಿ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...