alex Certify
ಕನ್ನಡ ದುನಿಯಾ       Mobile App
       

Kannada Duniya

ಕಡೆಗೂ ಸಿಕ್ಕಿ ಬಿದ್ದ ನವವಿವಾಹಿತನ ಹತ್ಯೆಗೈದಿದ್ದ ಆರೋಪಿ

ವಿವಾಹದ ಗಿಫ್ಟ್ ಹೆಸರಿನಲ್ಲಿ ಕೊರಿಯರ್ ಮೂಲಕ ಕಚ್ಚಾ ಬಾಂಬ್ ಪಾರ್ಸೆಲ್ ಮಾಡಿ ನವ ವಿವಾಹಿತ ಹಾಗೂ ಮತ್ತೊಬ್ಬರ ಸಾವಿಗೆ ಕಾರಣವಾಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಒಡಿಶಾ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಸಂಬಂಧ ಕಾಲೇಜು ಉಪನ್ಯಾಸಕನೊಬ್ಬನನ್ನು ವಶಕ್ಕೆ ಪಡೆಯಲಾಗಿದ್ದು, ತೀವ್ರ ವಿಚಾರಣೆ ನಡೆಸಲಾಗಿದೆ.

ಒಡಿಶಾದ ಬೋಲನ್ಗಿರಿ ಜಿಲ್ಲೆ ಪಟ್ನಾಗರ್ ಪಟ್ಟಣದಲ್ಲಿ ಫೆಬ್ರವರಿ 23 ರಂದು ಐದು ದಿನಗಳ ಹಿಂದಷ್ಟೇ ವಿವಾಹವಾಗಿದ್ದ 26 ವರ್ಷದ ಸಾಫ್ಟ್ ವೇರ್ ಇಂಜಿನಿಯರ್ ಸೌಮ್ಯ ಶೇಖರ್ ಸಾಹು ಮನೆಗೆ ಕೊರಿಯರ್ ಬಂದಿತ್ತು. ವಿವಾಹದ ಗಿಫ್ಟ್ ಎಂದು ಭಾವಿಸಿ ಸೌಮ್ಯ ಶೇಖರ್ ಅದನ್ನು ಓಪನ್ ಮಾಡಿದ್ದು, ಈ ವೇಳೆ ಅದರಲ್ಲಿದ್ದ ಬಾಂಬ್ ಸ್ಪೋಟಿಸಿ ಸೌಮ್ಯ ಶೇಖರ್ ಸಾಹು, ಆತನ ಸಂಬಂಧಿ 85 ವರ್ಷದ ಜೆಮಾಮಣಿ ಸಾವನ್ನಪ್ಪಿದ್ದರು. ನವ ವಿವಾಹಿತೆ 22 ವರ್ಷದ ರೀಮಾ ಕೂಡಾ ತೀವ್ರವಾಗಿ ಗಾಯಗೊಂಡಿದ್ದಳು.

ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತಲ್ಲದೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಸಿಐಡಿಗೆ ವಹಿಸಿದ್ದರು. ತನಿಖೆ ತೀವ್ರಗೊಳಿಸಿದ್ದ ಸಿಐಡಿ ಪೊಲೀಸರು ಕೊರಿಯರ್ ಛತ್ತೀಸ್ಘಡದ ರಾಜಧಾನಿ ರಾಯ್ಪುರದಿಂದ ಬಂದಿರುವುದನ್ನು ಪತ್ತೆ ಹಚ್ಚಿದ್ದರು. ಈ ಸಂಬಂಧ ಹಲವರನ್ನು ಪ್ರಶ್ನಿಸಿದ್ದು, ಇದೀಗ ಉಪನ್ಯಾಸಕ ಪುನಜಿ ಲಾಲ್ ಮೆಹರ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಈತನೇ ಕೊರಿಯರ್ ನಲ್ಲಿ ಬಾಂಬ್ ಕಳಿಸಿದ ಸೂತ್ರಧಾರನೆಂದು ಹೇಳಲಾಗಿದ್ದು, ಬೋಲನ್ಗಿರಿ ಜಿಲ್ಲೆಯ ಬೈನ್ಸಾದ ಜ್ಯೋತಿ ವಿಕಾಸ್ ಕಾಲೇಜಿನ ಪ್ರಾಂಶುಪಾಲನಾಗಿದ್ದ ಈತನನ್ನು ಹಿಂಬಡ್ತಿಗೊಳಿಸಿ ಸೌಮ್ಯ ಶೇಖರ್ ಸಾಹು ಅವರ ತಾಯಿಯನ್ನು ಪ್ರಾಂಶುಪಾಲರಾಗಿ ನೇಮಕ ಮಾಡಲಾಗಿತ್ತೆನ್ನಲಾಗಿದೆ. ಇದರಿಂದಾಗಿ ಹಠ ಸಾಧಿಸುತ್ತಿದ್ದ ಪುನಜಿ ಲಾಲ್ ಮೆಹಲ್ ದ್ವೇಷ ತೀರಿಸಿಕೊಳ್ಳಲು ತನ್ನ ಕೆಲ ಸ್ನೇಹಿತರ ಸಹಕಾರದೊಂದಿಗೆ ಈ ಕೃತ್ಯವೆಸಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...