alex Certify
ಕನ್ನಡ ದುನಿಯಾ       Mobile App
       

Kannada Duniya

”ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡ್ರೆ ನೀವೇ ಹೊಣೆ”

ಪತಿಯ ದೀರ್ಘಾವಧಿ ಕೆಲಸದಿಂದ ಬೇಸತ್ತ ದೆಹಲಿ ಪೊಲೀಸನ ಪತ್ನಿಯೊಬ್ಬಳು ಆಯಕ್ತರಿಗೆ ಪತ್ರ ಬರೆದಿದ್ದಾಳೆ. ಈ ರೀತಿ ದೀರ್ಘಾವಧಿ ಕೆಲಸ ಖಿನ್ನತೆಗೆ ದಾರಿ ಮಾಡಿಕೊಡುತ್ತದೆ. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವ ಆತಂಕ ಕೂಡ ಇದೆ ಅಂತಾ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.

ದೆಹಲಿ ಪೊಲೀಸ್ ಆಯುಕ್ತರಾದ ಅಮೂಲ್ಯ ಪಟ್ನಾಯಕ್ ಗೆ ಪತ್ರ ಬರೆದಿರುವ ಮಹಿಳೆ, ತನ್ನ ಪತಿಗೆ ಕೆಲಸದ ಅವಧಿಯನ್ನು ನಿಗದಿಪಡಿಸಿ, ಶಿಫ್ಟ್ ನಲ್ಲಿ ಕೆಲಸ ಮಾಡಲು ಅವಕಾಶ ನೀಡಿ. ಇಲ್ಲವಾದಲ್ಲಿ ಮುಂದಾಗುವ ಅನಾಹುತಕ್ಕೆ ನೀವೇ ಜವಾಬ್ಧಾರರು. ಕೆಲಸದ ಒತ್ತಡ ತಾಳಲಾಗದೆ ಆತ ಆತ್ಮಹತ್ಯೆಯ ಹಾದಿ ಹಿಡಿದ್ರೆ ಅದಕ್ಕೆ ನೀವೇ ಹೊಣೆ ಅಂತಾ ಬರೆದಿದ್ದಾಳೆ.

ತನ್ನ ಪತಿಯ ಹೆಸರು ಮತ್ತು ಹುದ್ದೆ ಯಾವುದು ಅನ್ನೋದನ್ನು ಆಕೆ ಬಹಿರಂಗಪಡಿಸಿಲ್ಲ. ಆದ್ರೆ ರಾಷ್ಟ್ರಪತಿ ಭವನದ ಭದ್ರತೆಗೆ ಆತ ನೇಮಕವಾಗಿರೋದಾಗಿ ತಿಳಿಸಿದ್ದಾಳೆ. ರಾಷ್ಟ್ರಪತಿ ಭವನದ ಸೆಕ್ಯೂರಿಟಿಗೆ ಒಟ್ಟು 700 ಜನರನ್ನು ನೇಮಕ ಮಾಡಲಾಗಿದೆ. ಆಯುಕ್ತರ ಅಧಿಕೃತ ಮೇಲ್ ಐಡಿಗೆ, ಇಮೇಲ್ ರವಾನಿಸಿದ್ದಾಳೆ.

ಆಕೆಯ ಪತಿ ದಿನಕ್ಕೆ 12 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಿದ್ದಾರಂತೆ. ಬೆಳಗ್ಗೆ 7ಕ್ಕೆ ಮನೆ ಬಿಟ್ಟರೆ, ರಾತ್ರಿ 9 ಗಂಟೆಗೆ ವಾಪಸ್ಸಾಗ್ತಾರಂತೆ. ಇದರಿಂದಾಗಿ ಕುಟುಂಬದ ಕಡೆಗೂ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ದಿನದ 12 ಗಂಟೆಗಳ ಕಾಲ ನಿಂತುಕೊಂಡೇ ಇರುವುದು ಅತ್ಯಂತ ಅಪಾಯಕಾರಿ ಅಂತಾ ಆಕೆ ಆತಂಕ ವ್ಯಕ್ತಪಡಿಸಿದ್ದಾಳೆ.

ಈ ಪತ್ರ ಕೈಸೇರಿದ ಬಳಿಕ ಪೊಲೀಸ್ ಆಯುಕ್ತರು ಎಚ್ಚೆತ್ತುಕೊಂಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದೆಹಲಿಯಲ್ಲಿ 2012ರಿಂದ ಇದುವರೆಗೆ 43 ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...