alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯಪಾನಿಗಳನ್ನು ಹಿಡಿದ ಪೊಲೀಸರಿಗೆ ಸಿಗುತ್ತೆ ಹಣ…!

ದಕ್ಷಿಣ ಗುಜರಾತ್ ನ ಸೂರತ್ ಪೊಲೀಸರು ಈ ಬಾರಿಯ ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಗುಜರಾತ್ ನಲ್ಲಿ ಪಾನ ನಿಷೇಧ ಜಾರಿಯಲ್ಲಿದ್ದು, ಆದರೆ ದಕ್ಷಿಣ ಗುಜರಾತ್ ನ ಹಲವು ಮಂದಿ ಹೊಸ ವರ್ಷಾಚರಣೆಗೆ ಗಡಿ ಭಾಗಕ್ಕೆ ತೆರಳಿ ಪಾರ್ಟಿ ಮುಗಿಸಿಕೊಂಡು ಬರುತ್ತಿರುವ ಕಾರಣ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಲಾಗಿದೆ.

ಸೂರತ್ ವಲಯದ ಐಜಿಪಿ ಜಿ.ಎಸ್. ಮಲ್ಲಿಕ್ ತಮ್ಮ ವ್ಯಾಪ್ತಿಯ ಸೂರತ್, ತಪಿ, ನವ್ಸಾರಿ, ವಲ್ಸಾದ್ ಹಾಗೂ ದಾಂಗ್ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸುತ್ತೋಲೆ ಕಳುಹಿಸಿದ್ದು, ಗುಜರಾತ್ ಗಡಿಗೆ ಹೊಂದಿಕೊಂಡಿರುವ ದಿಯು ಹಾಗೂ ದಮಾನ್ ರಸ್ತೆಗಳಲ್ಲಿ ತೀವ್ರ ನಿಗಾ ವಹಿಸುವಂತೆ ಸೂಚಿಸಿದ್ದಾರೆ.

ಮದ್ಯ ಸೇವಿಸಿ ವಾಹನ ಚಲಾಯಿಸಿಕೊಂಡು ಬರುವ ವ್ಯಕ್ತಿಗಳನ್ನು ಹಿಡಿದ ಪೊಲೀಸರಿಗೆ ತಲಾ 100 ರೂ. ಬಹುಮಾನ ನೀಡಬೇಕೆಂದು ಐಜಿಪಿ ತಮ್ಮ ಸುತ್ತೋಲೆಯಲ್ಲಿ ಆದೇಶಿಸಿದ್ದಾರೆ. ಗಡಿ ಭಾಗವಾದ ದಿಯು ಹಾಗೂ ದಮಾನ್ ಗೆ ಹೊಸ ವರ್ಷಾಚರಣೆಗೆ ತೆರಳುವ ಹಲವು ಮಂದಿ ಪಾರ್ಟಿ ಮುಗಿಸಿಕೊಂಡು ವಾಹನಗಳಲ್ಲಿ ಅಂದೇ ಮರಳಿ ಬರುತ್ತಿದ್ದು, ಕಳೆದ ವರ್ಷ ವಲ್ಸಾದ್ ವ್ಯಾಪ್ತಿಯೊಂದರಲ್ಲೇ ಸುಮಾರು 325 ಮಂದಿ ಬಂಧನಕ್ಕೀಡಾಗಿದ್ದರು. ಕುಡಿದ ಅಮಲಿನಲ್ಲಿ ಅಪಘಾತಕ್ಕೆ ಕಾರಣವಾಗುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಈ ಬಾರಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...