alex Certify
ಕನ್ನಡ ದುನಿಯಾ       Mobile App
       

Kannada Duniya

ಚಲಿಸುತ್ತಿರುವ ರೈಲಿನಿಂದ ಹಾರಿ ಪರಾರಿಯಾದ ಖೈದಿ

ಚಲಿಸುತ್ತಿರುವ ರೈಲಿನಿಂದ ವಿಚಾರಣಾಧೀನ‌ ಖೈದಿ ಪಾರಾಗಿರುವ ಘಟನೆ ನಡೆದಿದೆ. ಅನೇಕ ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ನಟೋರಿಯಸ್ ಸರಗಳ್ಳನನ್ನ ಜೂನ್ 10 ರಂದು ಹೈದರಾಬಾದ್ ಕೋರ್ಟ್ ನಲ್ಲಿ ನಡೆಯುವ ವಿಚಾರಣೆಗಾಗಿ ಕರೆದುಕೊಂಡು ಹೋಗಲಾಗಿತ್ತು. ವಿಚಾರಣೆ ಮುಗಿಸಿ ವಾಪಾಸ್ ಕರೆದುಕೊಂಡು ಬರುವಾಗ‌ ಈತ ಓಡುತ್ತಿರುವ ರೈಲಿನಿಂದ ಜಿಗಿದು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ.

26 ವರ್ಷದ ಸಲ್ಮಾನ್ ಅಲಿಯಾಸ್ ದಾಂತ್ ತೂಟ ಎಂಬಾತನನ್ನು ಓರ್ವ ಮುಖ್ಯ ಪೇದೆ ಮತ್ತು ಐವರು ಪೇದೆಗಳ ಜೊತೆ ಕಳುಹಿಸಲಾಗಿತ್ತು. ಪೊಲೀಸರೆಲ್ಲಾ ನಿದ್ರಿಸುತ್ತಿದ್ದಾಗ ಸಲ್ಮಾನ್ ಮೂತ್ರ ವಿಸರ್ಜಿಸಲು ಶೌಚಾಲಯಕ್ಕೆ ಹೋಗುವುದಾಗಿ ಹೇಳಿದ್ದನು. ನಿದ್ದೆಯ ಮಂಪರಿನಲ್ಲಿದ್ದ ಪೊಲೀಸರು ಒಬ್ಬನೇ ಹೋಗುವಂತೆ ಸೂಚಿಸಿದ್ದರು.

ಶೌಚಾಲಯದಿಂದ 20 ನಿಮಿಷವಾದರೂ ಸಲ್ಮಾನ್ ವಾಪಾಸಾಗದೆ ಇದ್ದಾಗ ಪೊಲೀಸರಿಗೆ ಆತ ಪರಾರಿಯಾಗಿರುವುದು ತಿಳಿದುಬಂದಿದೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಡಿಸಿಪಿ ಡಿ.ಕೆ.ಎಸ್. ಸಿಂಗ್ ತಿಳಿಸಿದ್ದಾರೆ. ಸಲ್ಮಾನ್ ಮೂಲತಃ ದೆಹಲಿಯ ಭಜನ್ ಪುರ ನಿವಾಸಿಯಾಗಿದ್ದು, ಹೈದರಾಬಾದ್ ಪೊಲೀಸ್ ನವರಿಗೆ ಬೇಕಿದ್ದನು. ಆದರೆ 2017 ರಲ್ಲಿ ಈಶಾನ್ಯ ರಾಜ್ಯದ ಪೊಲೀಸರು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದರು. ಈತನನ್ನ ಹಿಡಿದುಕೊಟ್ಟವರಿಗೆ 1 ಲಕ್ಷ ಬಹುಮಾನವನ್ನ ದೆಹಲಿ ಪೊಲೀಸರು ಘೋಷಿಸಿದ್ದರು.

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...