alex Certify
ಕನ್ನಡ ದುನಿಯಾ       Mobile App
       

Kannada Duniya

ಮಧ್ಯಪ್ರದೇಶದಲ್ಲೊಂದು ಅಮಾನುಷ ಘಟನೆ

police-tortureಸೊಸೆಯ ಹತ್ಯೆ ಪ್ರಕರಣವೊಂದರಲ್ಲಿ ತಪ್ಪೊಪ್ಪಿಕೊಳ್ಳುವಂತೆ ಒತ್ತಾಯಿಸಿದ ಪೊಲೀಸರು ಇಡೀ ಕುಟುಂಬದವರಿಗೆ ಪರಸ್ಪರರ ಮೂತ್ರ ಕುಡಿಯುವಂತೆ ಒತ್ತಡ ಹೇರಿದ್ದಾರೆಂದು ಮಧ್ಯ ಪ್ರದೇಶದ ಮಹಿಳೆಯೊಬ್ಬಳು ಆರೋಪ ಮಾಡಿದ್ದಾಳೆ.

40 ವರ್ಷದ ಈಕೆ ಸೆಹರ್ ಜಿಲ್ಲೆಯ ಸಿಂಗಾರ್ಚೌರಿ ಗ್ರಾಮದ ನಿವಾಸಿ. ಈ ಮಹಿಳೆಯ ಸೊಸೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ಲು. ಆಕೆಯ ಮನೆಯವರು ದಾಖಲಿಸಿದ ದೂರಿನನ್ವಯ ಪತಿ, ಅತ್ತೆ, ಮಾವನನ್ನು ಬಂಧಿಸಿದ ಅಶ್ತಾ ಠಾಣೆ ಪೊಲೀಸರು  ವಿಚಾರಣೆ ನೆಪದಲ್ಲಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರಂತೆ.

ವಿಚಾರಣೆ ಹೆಸರಲ್ಲಿ ತಮ್ಮನ್ನು 15 ದಿನ ಠಾಣೆಯಲ್ಲೇ ಇರಿಸಿಕೊಂಡಿದ್ದಾರೆ ಅನ್ನೋದು ಈಕೆಯ ಅಳಲು. ಮಹಿಳೆ, ಆಕೆಯ ಪತಿ, ಮಗ ಮತ್ತು ನಾಲ್ವರು ಅಪ್ರಾಪ್ತ ಮಕ್ಕಳಿಗೆ ಪರಸ್ಪರರ ಮೂತ್ರ ಕುಡಿಯುವಂತೆ ಹಿಂಸಿಸಿದ್ದಾರಂತೆ. ಈ ಬಗ್ಗೆ ನೊಂದ ಮಹಿಳೆ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್, ಡಿಜಿಪಿ ಆರ್.ಕೆ. ಶುಕ್ಲಾ, ಮಾನವ ಹಕ್ಕುಗಳ ಆಯೋಗ ಮತ್ತು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾಳೆ. ಈಕೆಯ ಮಗ ಮೂರು ವರ್ಷಗಳ ಹಿಂದೆ ಪಟ್ಟಣ್ ಗ್ರಾಮದ ಯುವತಿಯನ್ನು ಮದುವೆಯಾಗಿದ್ದ, ಕಳೆದ ಒಂದು ವರ್ಷದ ಹಿಂದೆ ಆಕೆ ನಾಪತ್ತೆಯಾಗಿದ್ದು, ಸೆಪ್ಟೆಂಬರ್ 27ರಂದು ಭೂಪಾಲ್ ನಲ್ಲಿ ಪತ್ತೆಯಾಗಿದ್ದಾಳೆ. ಸೆಪ್ಟೆಂಬರ್ 28ರಂದು ಅವಳ ಅತ್ತೆ, ಪೊಲೀಸರ ವಿರುದ್ಧ ದೂರು ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...