alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದಾತ್ಮಕ ವಿಡಿಯೋ ತೆಗೆಸಲು ಫೇಸ್ ಬುಕ್ ಮೊರೆ ಹೋದ ಪೊಲೀಸರು

tanmay bhatಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರುಗಳಿಗೆ ಅವಹೇಳನವಾಗುವಂತೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿರುವ ತನ್ಮಯ್ ಭಟ್ ರ ವಿಡಿಯೋವನ್ನು ಬ್ಲಾಕ್ ಮಾಡಿಸಲು ಮುಂದಾಗಿರುವ ಮುಂಬೈ ಪೊಲೀಸರು, ಸಾಮಾಜಿಕ ಜಾಲತಾಣ ಸಂಸ್ಥೆಗಳನ್ನು ಸಂಪರ್ಕಿಸಿದ್ದಾರೆ.

ಮುಂಬೈ ಸಹಾಯಕ ಪೊಲೀಸ್ ಆಯುಕ್ತ ಯಶ್ವಂತ್ ಪಾಠಕ್ ಈ ಕುರಿತು ಮಾಹಿತಿ ನೀಡಿದ್ದು, ಸೈಬರ್ ಕ್ರೈಂ ಪೊಲೀಸರು ಫೇಸ್ ಬುಕ್, ಯೂ ಟ್ಯೂಬ್ ಹಾಗೂ ಗೂಗಲ್ ಸಂಸ್ಥೆಯನ್ನು ಸಂಪರ್ಕಿಸಿದ್ದು, ವಿಡಿಯೋವನ್ನು ಬ್ಲಾಕ್ ಮಾಡಲು ಸೂಚಿಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಐಪಿ ಅಡ್ರೆಸ್ ಪತ್ತೆ ಹಚ್ಚುವ ಕಾರ್ಯ ನಡೆದಿದ್ದು, ಇದರಿಂದ ವಿಡಿಯೋ ಅಪ್ ಲೋಡ್ ಆದ ಮೂಲ ಬಹಿರಂಗವಾಗುತ್ತದೆ ಎಂದು ಹೇಳಿದ್ದಾರೆ.

ಈ ಮಧ್ಯೆ ತನ್ಮಯ್ ಭಟ್ ವಿಡಿಯೋಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಹಾರಾಷ್ಟ್ರ ನವ ನಿರ್ಮಾಣ ಸೇನೆ, ತನ್ಮಯ್ ಭಟ್ ವಿರುದ್ದ ದೂರು ದಾಖಲಿಸಿದ್ದು, ಆತನನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದೆ. ಬಾಲಿವುಡ್ ನ ಆನೇಕ ತಾರೆಯರೂ, ಖ್ಯಾತ ವ್ಯಕ್ತಿಗಳಿಬ್ಬರನ್ನು ಅಣಕು ಮಾಡಿರುವ ಈ ವಿಡಿಯೋಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...