alex Certify
ಕನ್ನಡ ದುನಿಯಾ       Mobile App
       

Kannada Duniya

ಎಂಬಿಎ ಪದವೀಧರನ ಕೆಲ್ಸ ಕೇಳಿದ್ರೆ ಶಾಕ್ ಆಗ್ತೀರಾ..!

LUXURY CARಬ್ರ್ಯಾಂಡೆಡ್ ಸೂಟ್, ಮಿರಮಿರ ಮಿನುಗುವ ಬೂಟುಗಳು, ಜೆಲ್ ಹಾಕಿ ಸ್ಟೈಲಾಗಿ ಬಾಚಿದ ತಲೆಗೂದಲು, ನೋಡಿದ್ರೆ ಥೇಟ್ ಉದ್ಯಮಿಯಂತಿದ್ದಾನೆ.

ಈತ ಫೈವ್ ಸ್ಟಾರ್ ಹೋಟೆಲ್ ಗಳೊಳಕ್ಕೆ ಆರಾಮಾಗಿ ಬರ್ತಾನೆ, ಯಾವಾಗ್ಲೂ ಫೋನ್ ನಲ್ಲಿ ಇಂಗ್ಲಿಷ್ ನಲ್ಲೇ ಸಂಭಾಷಣೆ ನಡೆಸ್ತಾನೆ. ಮಾತಾಡ್ತಾನೇ ವಾಲೆಟ್ ಕೌಂಟರ್ ಬಳಿ ಹೋಗಿ ತನ್ನದೇ ಎನ್ನುವಂತೆ ಯಾರದ್ದೋ ಕಾರಿನ ಕೀ ಎತ್ತಿಕೊಳ್ತಾನೆ. ಆರಾಮಾಗಿ ಐಷಾರಾಮಿ ಕಾರು ಓಡಿಸ್ಕೊಂಡು ಎಸ್ಕೇಪ್ ಆಗ್ತಾನೆ.

ಇವನೇ 35 ವರ್ಷದ ಸತೇಂದರ್ ಸಿಂಗ್ ಶೇಖಾವತ್. ಎಂಬಿಎ ಪದವೀಧರ. ಆಡಿ, ಮರ್ಸಿಡಿಸ್, ಬಿಎಂಡಬ್ಲ್ಯೂ ಸೇರಿದಂತೆ 20 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಕದ್ದಿದ್ದ. ನವದೆಹಲಿಯಲ್ಲಿ ಹೋಟೆಲ್ ಹಾಲಿಡೇಯಿಂದ ಇತ್ತೀಚೆಗಷ್ಟೆ ಆಡಿ ಕ್ಯೂ7 ಕಾರ್ ಎಗರಿಸಿದ್ದ ಖದೀಮ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಾರ್ ಕಳ್ಳತನ ಇವನಿಗೆ ಹೊಸದೇನು ಅಲ್ಲ, ಇದಕ್ಕೂ ಮೊದಲು ಮಧ್ಯಪ್ರದೇಶ, ರಾಜಸ್ತಾನ ಮತ್ತು ಮಹಾರಾಷ್ಟ್ರದಲ್ಲಿ ಇದೇ ರೀತಿ ಕಾರ್ ಕದ್ದು ಜೈಲು ಸೇರಿದ್ದ.

ಆಗಸ್ಟ್ 26ರಂದು ಅರ್ಜುನ್ ಗರ್ಗ್ ಎಂಬುವವರು ಹೋಟೆಲ್ ಹಾಲಿಡೇಗೆ ತಮ್ಮ ಕುಟುಂಬದವರೊಂದಿಗೆ ಊಟಕ್ಕೆ ಬಂದಿದ್ರು. ಪಾರ್ಕಿಂಗ್ ಲಾಟ್ ನಲ್ಲಿ ನಿಲ್ಲಿಸಿದ್ದ ಅವರ ಆಡಿ ಕ್ಯೂ7 ಕಾರನ್ನು ಸತೇಂದರ್ ಕದ್ದೊಯ್ದಿದ್ದ. ಸಿಸಿ ಟಿವಿಯಲ್ಲಿ ಇವನ ಹೈಟೆಕ್ ಕಳ್ಳತನ ಸೆರೆಯಾಗಿತ್ತು. ಇವನ ಹುಡುಕಾಟದಲ್ಲಿದ್ದ ಪೊಲೀಸರಿಗೆ ಸೆಪ್ಟೆಂಬರ್ 12ರಂದು ಸತೇಂದರ್, ಹಯಾತ್ ರೀಜೆನ್ಸಿ ಹೋಟೆಲ್ ನಲ್ಲಿ ಕೈಚಳಕ ತೋರಲು ಬರ್ತಿದ್ದಾನೆ ಅನ್ನೋದು ಗೊತ್ತಾಯ್ತು. ಅಲ್ಲಿ ಆಡಿ ಕಾರ್ ಕದಿಯುವ ಪ್ರಯತ್ನದಲ್ಲಿ ಸಿಕ್ಕಿಬಿದ್ದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...