alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರ ಆರೋಪಿಗೆ ಠಾಣೆಯಲ್ಲೇ ಥಳಿಸಿದ ಶಾಸಕ

ಅತ್ಯಾಚಾರವೆಸಗಿ ಪೊಲೀಸ್ ಬಂಧನದಲ್ಲಿದ್ದ ಆರೋಪಿಗೆ, ಎಂಐಎಂ ಶಾಸಕ ಠಾಣೆಗೆ ಹೋಗಿ ಥಳಿಸಿರುವ ಘಟನೆ ನಡೆದಿದೆ. ಹೈದ್ರಾಬಾದ್ ನ ಮಾಲಕ್ ಪೇಟೆ ಜಿಲ್ಲೆಯ ಎಂಐಎಂ ಶಾಸಕ ಅಹಮದ್ ಬಿನ್ ಅಬ್ದುಲ್ಲಾ ಬಲಾಲಾ ತನ್ನ ಬೆಂಬಲಿಗರೊಂದಿಗೆ ಹೋಗಿ, ಅತ್ಯಾಚಾರ ಆರೋಪಿಯನ್ನ ಥಳಿಸಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

37 ವರ್ಷದ ವ್ಯಕ್ತಿ ಆರು ವರ್ಷದ ಬಾಲಕಿಯನ್ನ ಅತ್ಯಾಚಾರ ಮಾಡಿ ಜೈಲು ಸೇರಿದ್ದ. ಅಲ್ಲದೆ ಈ ಆರೋಪಿ ಎಂಐಎಂ ಕಾರ್ಯಕರ್ತನಾಗಿದ್ದ. ಹೀಗಾಗಿ ಆಕ್ರೋಶಗೊಂಡ ಶಾಸಕ ಮತ್ತು ಆತನ ಬೆಂಬಲಿಗರು ಠಾಣೆಗೆ ನುಗ್ಗಿ ಆರೋಪಿಯನ್ನ ಹೊಡೆದಿದ್ದಾರೆ. ಇಷ್ಟೆಲ್ಲಾ ಆಗ್ತಿದ್ರೂ ಪೊಲೀಸರು ಮೂಕ ಪ್ರೇಕ್ಷಕರಂತೆ ನೋಡುತ್ತಿದ್ರು.

ಪೊಲೀಸರು ಮತ್ತು ಅಧಿಕಾರಿಗಳು ಶಾಸಕರು ಠಾಣೆಗೆ ನುಗ್ಗಿ ಆರೋಪಿಗೆ ಥಳಿಸಿದ್ದನ್ನು ಧೃಡಿಕರಿಸಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಲ್ತಾನ್ ಬಜಾರ್ ಎಸಿಪಿ ಚೇತನ್ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವರದಿ ಬಂದ ಬಳಿಕ ಶಾಸಕರ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

ಆರೋಪಿ ಎಂಐಎಂ ಕಾರ್ಯಕರ್ತನಾಗಿದ್ರಿಂದ, ಶಾಸಕರು ಈ ರೀತಿ ವರ್ತಿಸಿದ್ದಾರೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...