alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸ್ ಠಾಣೆಯಲ್ಲೇ SI ಬಿಂದಾಸ್ ಡಾನ್ಸ್…!

ಶನಿವಾರ ಮಧ್ಯಾಹ್ನದ ಸಮಯ. ಏರಿಯಾ ಸಂಪೂರ್ಣ ಶಾಂತವಾಗಿತ್ತು. ಸಬ್ ಇನ್ಸ್ ಪೆಕ್ಟರ್ ಕೃಷ್ಣ ಸಾಧನ್ ಮಂಡಲ್ ಆರಾಮಾಗಿ ಕುಳಿತಿದ್ರು. ಕೆಲಸವಂತೂ ಇಲ್ಲ ಏನಾದ್ರೂ ಕ್ರಿಯೇಟಿವ್ ಆಗಿ ಮಾಡೋಣ ಅಂದ್ಕೊಂಡು ಠಾಣೆಯಲ್ಲೇ ಡಾನ್ಸ್ ಶುರು ಮಾಡಿದ್ದಾರೆ.

ಕ್ರಿಮಿನಲ್ ಗಳನ್ನು ಬಂಧಿಸಿಟ್ಟಿದ್ದ ಲಾಕಪ್ ಗಳ ಎದುರಲ್ಲೇ ಬಾಲಿವುಡ್ ಹಾಡುಗಳಿಗೆ ಸ್ಟೆಪ್ ಹಾಕಿದ್ದಾರೆ. ಇನ್ಸ್ ಪೆಕ್ಟರ್ ಬಿಂದಾಸ್ ನೃತ್ಯವನ್ನು ನೋಡಿ ಕೆಂಗಣ್ಣಾಗಿರೋ ಹಿರಿಯ ಅಧಿಕಾರಿಗಳು, ಅವರನ್ನು ಕರ್ತವ್ಯದಿಂದ್ಲೇ ವಜಾ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಹೀರಾಪುರದಲ್ಲಿ ಈ ಘಟನೆ ನಡೆದಿದೆ.

ಇನ್ಸ್ ಪೆಕ್ಟರ್ ಬಾಲಿವುಡ್ ಹಾಡುಗಳಿಗೆ ಸೊಂಟ ಬಳುಕಿಸ್ತಿದ್ರೆ ಠಾಣೆಯಲ್ಲಿದ್ದ ಮಹಿಳಾ ಪೊಲೀಸರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ರು. ಈ ವಿಡಿಯೋ ಕೂಡ ವೈರಲ್ ಆಗಿದೆ. ಘಟನೆ ಬಗ್ಗೆ ತನಿಖೆ ನಡೆಸುವಂತೆ ಇಲಾಖೆ ಆದೇಶಿಸಿದೆ. ತಮ್ಮ ಮಲ್ಟಿ ಟ್ಯಾಲೆಂಟ್ ಪ್ರದರ್ಶನ ಮಾಡಲು ಹೋಗಿ, ಪೊಲೀಸ್ ಇನ್ಸ್ ಪೆಕ್ಟರ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...