alex Certify
ಕನ್ನಡ ದುನಿಯಾ       Mobile App
       

Kannada Duniya

ಆರೋಪಿ ಹಿಡಿಯಲು ಆಟೋ ಚಾಲನೆ ಕಲಿತ ಪೇದೆ

auto-rickshawಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡ ಆರೋಪಿಗಳನ್ನು ಹಿಡಿಯಲು ಪೊಲೀಸರು ಹಲವಾರು ವಿಧಾನ ಅನುಸರಿಸುತ್ತಾರೆ. ಅಮಾಯಕನೊಬ್ಬನನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಸೆರೆ ಹಿಡಿಯಲು ಮುಂಬೈ ಪೊಲೀಸ್ ಪೇದೆಯೊಬ್ಬರು ಆಟೋರಿಕ್ಷಾ ಚಾಲನೆ ಮಾಡುವುದನ್ನು ಕಲಿತಿದ್ದು, ಕೊನೆಗೂ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ.

ಮುಂಬೈನ ಖಡಕ್ಪಾಡಾ ಏರಿಯಾದಲ್ಲಿ ಸಂಜಯ್ ವಿರೇನ್ ಸ್ವಾಮಿ ಅಲಿಯಾಸ್ ಪರ್ಡಿ ಎಂಬಾತ 50 ವರ್ಷದ ವಾಚ್ ಮನ್ ಗಣೇಶ್ ಕಿಲ್ಲಾರೆಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ಆತನ ಪತ್ತೆಗೆ ಇನ್ಸ್ ಪೆಕ್ಟರ್ ಹೇಮಂತ್ ಧೋಲೆ, ದಿನೇಶ್ ಸೋನೆವಾನೆ ಹಾಗೂ ಪೇದೆ ಸದಾಶಿವ್ ದಾವ್ರೆಯವರಿದ್ದ ತಂಡ ಹುಡುಕಾಡುತ್ತಿತ್ತು.

ಆರೋಪಿಗೆ ಗೆಳತಿಯೊಬ್ಬಳು ಇರುವುದರ ಮಾಹಿತಿ ಪಡೆದ ಈ ತಂಡ, ಆಕೆಯ ವಿಚಾರಣೆ ನಡೆಸಿದಾಗ ಸಂಜಯ್ ವಿರೇನ್ ಗೆ ಆಟೋರಿಕ್ಷಾದಲ್ಲಿ ಅಡ್ಡಾಡುವ ಖಯಾಲಿ ಇರುವ ವಿಚಾರ ತಿಳಿದುಬಂತು. ಆಗ ಪೇದೆ ಸದಾಶಿವ್, ಆಟೋರಿಕ್ಷಾ ಚಾಲನೆಯನ್ನು ಕಲಿತರಲ್ಲದೇ ಆರೋಪಿ ಇರಬಹುದಾದ ಸ್ಥಳಗಳಲ್ಲಿ ಆಟೋದಲ್ಲಿ ತಿರುಗುತ್ತಿದ್ದರು. ಕಡೆಗೂ ಒಂದು ದಿನ ಆರೋಪಿ, ಪೇದೆ ಸದಾಶಿವ್ ಚಾಲನೆ ಮಾಡುತ್ತಿದ್ದ ಆಟೋರಿಕ್ಷಾ ಏರಿದ್ದಾನೆ. ತಕ್ಷಣವೇ ಮೇಲಾಧಿಕಾರಿಗಳಿಗೆ ಅವರು ಮಾಹಿತಿ ನೀಡಿದ್ದು, ಮಾರ್ಗ ಮಧ್ಯದಲ್ಲೇ ಆರೋಪಿ ಸಂಜಯ್ ವಿರೇನ್ ನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಈತ ಹಲವು ದುಷ್ಕೃತ್ಯಗಳಲ್ಲಿ ಪಾಲ್ಗೊಂಡಿರುವ ಮಾಹಿತಿಯೂ ಬಹಿರಂಗವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...