alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ 2 ವರ್ಷದ ನಂತ್ರ ಮದುವೆ ಮನೆಯಲ್ಲಿ ಸಿಕ್ಕ

ಎರಡು ವರ್ಷಗಳ ಕಾಲ ಪೊಲೀಸ್ ಜೊತೆ ಕಣ್ಣಮುಚ್ಚಾಲೆ ಆಟವಾಡಿದ್ದ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ನಾಸಿಕ್ ಜೈಲಿನಲ್ಲಿದ್ದ ಮನೋಜ್ ಕುಮಾರ್ ಅಲಿಯಾಸ್ ಗಬ್ಬರ್ ಬಿಹಾರದ ಮದುವೆಯೊಂದರಲ್ಲಿ ಕುಣಿಯುತ್ತಿದ್ದಾಗ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾನೆ.

ಮನೋಜ್ ಕುಮಾರ್ ಗೆ ಜೀವಾವಧಿ ಶಿಕ್ಷೆಯಾಗಿದೆ. ಪೆರೋಲ್ ಮೇಲೆ 2 ವರ್ಷಗಳ ಹಿಂದೆ ಹೊರ ಬಂದಿದ್ದ ಗಬ್ಬರ್ ನಂತ್ರ ನಾಪತ್ತೆಯಾಗಿದ್ದ. ಸತತ 2 ವರ್ಷಗಳಿಂದ ಪೊಲೀಸರು ಆತನ ಪತ್ತೆ ಕಾರ್ಯ ನಡೆಸುತ್ತಿದ್ದರು. ಪೊಲೀಸರು ಬುಧವಾರ ಮನೋಜ್ ನನ್ನು ನಾಸಿಕದ ಜೈಲಧಿಕಾರಿಗಳ ವಶಕ್ಕೆ ನೀಡಿದ್ದಾರೆ.

2012 ರಲ್ಲಿ 14 ವರ್ಷದ ಹುಡುಗಿಯನ್ನು ಅಪಹರಿಸಿ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಆತನನ್ನು ಬಂಧಿಸಲಾಗಿತ್ತು. 2014 ರಲ್ಲಿ ವಿಚಾರಣೆ ಮುಗಿಸಿದ್ದ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. 2016 ರಲ್ಲಿ ತಾಯಿ ಅನಾರೋಗ್ಯದ ಕಾರಣ 15 ದಿನಗಳ ಪೆರೋಲ್ ನೀಡಲಾಗಿತ್ತು. ಪೆರೋಲ್ ಮೇಲೆ ಬಿಹಾರಕ್ಕೆ ಹೋಗಿದ್ದ ಮನೋಜ್ 15 ದಿನದ ನಂತ್ರವೂ ಜೈಲಿಗೆ ಬಂದಿರಲಿಲ್ಲ.

ಪೊಲೀಸ್ ತಂಡವೊಂದು ಬಿಹಾರಕ್ಕೆ ತೆರಳಿ ಹುಡುಕಾಟ ಶುರು ಮಾಡಿತ್ತು. ಜೂನ್ 24 ರಂದು ಮನೆ ಬಳಿ ನಡೆಯುತ್ತಿರುವ ಮದುವೆ ಸಮಾರಂಭದಲ್ಲಿ ಮನೋಜ್ ಕುಣಿಯುತ್ತಿದ್ದಾನೆಂಬ ವಿಷ್ಯ ಪೊಲೀಸರಿಗೆ ತಿಳಿಯಿತು. ಮನೋಜ್ ಪತ್ತೆ ಸುಲಭವಾಗಿರಲಿಲ್ಲ. ಮೊದಲಿಗಿಂತ ದಪ್ಪಗೆ ಹಾಗೂ ಮೀಸೆ, ಗಡ್ಡ ಬಂದಿದ್ದರಿಂದ ಗುರುತು ಹಿಡಿಯಲು ಸ್ವಲ್ಪ ಕಷ್ಟವಾಯ್ತು ಎಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...