alex Certify
ಕನ್ನಡ ದುನಿಯಾ       Mobile App
       

Kannada Duniya

ತಾಯಿಯ ಆತ್ಮಹತ್ಯೆಗೆ ಕಾರಣವಾಯ್ತು ಮಗನ ಹೇರ್ ಕಟ್ಟಿಂಗ್..!

ball_cutting_2017515_102333_14_05_2017

ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ನಾಲ್ಕು ದಿನಗಳ ಹಿಂದೆ ಮಗ ಹೇರ್ ಕಟ್ ಮಾಡಿಸಿಕೊಂಡು ಬಂದಿದ್ದ. ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದಿತ್ತು ಎಂದು ಮಹಿಳೆಯ ಪತಿ ವಾಯುಪಡೆಯ ಸಿಬ್ಬಂದಿ ಹೇಳಿದ್ದಾರೆ.

ವಾಯುಪಡೆಯ ಕ್ಯಾಂಪಸ್ ನಲ್ಲಿ ವಾಸವಾಗಿರುವ ಮಹೇಶ್ಚಂದ್ರ ಪತ್ನಿ ಬೀನಾ ಈ ಕೆಲಸ ಮಾಡಿಕೊಂಡಾಕೆ. ಮೇ 10 ರಂದು ಬೀನಾಗೆ ವಾಂತಿ ಕಾಣಿಸಿಕೊಂಡಿದೆ. ನಿಂಬುರಸ ಸೇವನೆಯಿಂದ ಕಡಿಮೆಯಾಗಿತ್ತು. ಆದರೆ ರಾತ್ರಿ ಹೊಟ್ಟೆ ನೋವು ಕಾಣಿಸಿದೆ. ತಕ್ಷಣ ಅವರನ್ನು ಕ್ಯಾಂಪಸ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಎರಡು ದಿನ ಕಳೆದ್ರೂ ಸುಧಾರಿಸದ ಕಾರಣ ಮತ್ತೊಂದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಕೆಲ ಹೊತ್ತಿನಲ್ಲೇ ಆಕೆ ಸಾವನ್ನಪ್ಪಿದ್ದಾಳೆ.

ಪೊಲೀಸ್ ಹೇಳಿಕೆ ಪ್ರಕಾರ ಮೇ 10ರಂದು ಮಗ ಹೊಸ ರೀತಿಯಲ್ಲಿ ಹೇರ್ ಸ್ಟೈಲ್ ಮಾಡಿಸಿಕೊಂಡು ಬಂದಿದ್ದ, ಇದು ತಾಯಿಗೆ ಸರಿ ಕಾಣಲಿಲ್ಲ. ಇದೇ ವಿಷಯಕ್ಕೆ ಗಲಾಟೆ ನಡೆದಿದೆ. ಮನೆಯ ವಾತಾವರಣ ಶಾಂತಗೊಳಿಸಲು ಮನೆಯಿಂದ ಹೊರಹೋಗಿದ್ದಾನೆ. ಮತ್ತೆ ಮನೆಗೆ ವಾಪಸ್ ಬಂದಾಗ ವಾಂತಿ ಮಾಡುತ್ತಿರುವುದು ಕಂಡು ಬಂದಿದೆ.

ನಿಂಬು ನೀರು ಸೇವನೆ ಮಾಡಿದಾಗ ಪರಿಸ್ಥಿತಿ ಸುಧಾರಿಸಿದೆ. ಬೇರೆ ಏನೂ ಸೇವಿಸಲ್ಲ ಎಂದ ಮಹಿಳೆ ವೈದ್ಯರ ಬಳಿ ಹೇಳಬೇಡ. ಮನೆ ಗಲಾಟೆ ಬೀದಿಗೆ ಬರುತ್ತದೆ ಎಂದಿದ್ದಾಳೆ. ವಿಚಾರಣೆ ವೇಳೆ ಬೀನಾ ವಿಷಕಾರಿ ಮಾತ್ರೆ ಸೇವನೆ ಮಾಡಿದ್ದಳು ಎಂಬುದು ತಿಳಿದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಚುರುಕುಗೊಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...