alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಜೆಪಿ ವಿವಾದಿತ ಅಭ್ಯರ್ಥಿ ಮೇಲಿರುವ ಪ್ರಕರಣಗಳೆಷ್ಟು ಗೊತ್ತಾ…?

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿರುವ ಬಿಜೆಪಿಯ ವಿವಾದಾತ್ಮಕ ನಾಯಕ ರಾಜಾ ಸಿಂಗ್ ಅವರು ತಮ್ಮ ವೈಯಕ್ತಿಕ ವಿವರವನ್ನು ಬಹಿರಂಗಪಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿದೆ.

ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರುವಾಸಿಯಾದ ರಾಜಾ ಸಿಂಗ್ ಗೋಶಮಹಲ್ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಅವರ ವಿರುದ್ಧ 43 ಕ್ರಿಮಿನಲ್ ಪ್ರಕರಣಗಳು ಇವೆ. ಚುನಾವಣೆ ಅಫಿಡೆವಿಟ್ನಲ್ಲಿ ತಮ್ಮಲ್ಲಿ 2.87 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ಹೇಳಿಕೊಂಡಿದ್ದಾರೆ.

ರೋಹಿಂಗ್ಯ ಮುಸ್ಲಿಮರ ವಿರುದ್ಧ ಅನಧಿಕೃತ ರ್ಯಾಲಿ ಆಯೋಜನೆ, ದ್ವೇಷ ಕಾರುವ ಭಾಷಣ ಮಾಡಿದ್ದಾರೆಂದು ಅವರ ಮೇಲೆ ಹೆಚ್ಚಿನ ಪ್ರಕರಣಗಳಿವೆ. ಈವರೆಗೆ ಯಾವುದೇ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾಗಿಲ್ಲ.

ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಭಾರತ್ ಮಾತಾಕೀ ಜೈ ಮತ್ತು ವಂದೇ ಮಾತರಂ ಘೋಷಣೆ ಮಾಡದಿರುವವರನ್ನು ದೇಶದಿಂದಲೇ ಹೊರಹಾಕಲಾಗುವುದು ಎಂದೂ ಸಹ ರಾಜಾ ಸಿಂಗ್ ಹೇಳಿಕೆ ನೀಡಿದ್ದರು. ಮತ್ತು ಸಂಸದ ಅಸಾವುದ್ದೀನ್ ಓವೈಸಿ ಅವರನ್ನು ದೇಶದ್ರೋಹಿ ಎಂದು ಕರೆದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...