alex Certify
ಕನ್ನಡ ದುನಿಯಾ       Mobile App
       

Kannada Duniya

ಲೋಕಸಭಾ ಸದಸ್ಯ ಕಾನ್ರಾಡ್ ಸಂಗ್ಮಾ ರಾಜೀನಾಮೆ

ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಕೆ. ಸಂಗ್ಮಾ ಅವರು ಲೋಕಸಭೆಯ ಸಂಸದ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ವಾರದ ಹಿಂದಷ್ಟೇ ಅವರು ದಕ್ಷಿಣ ತುರಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜಯ ಸಾಧಿಸಿದ್ದರು.

ಮಾರ್ಚ್‌ನಲ್ಲಿ ಮೇಘಾಲಯದ ಮುಖ್ಯಮಂತ್ರಿಯಾಗಿ ಸಂಗ್ಮಾ ಅಧಿಕಾರ ಸ್ವೀಕರಿಸಿದ್ದು, ಅವರು 6 ತಿಂಗಳೊಳಗೆ ವಿಧಾನಸಭೆ ಸದಸ್ಯರಾಗಬೇಕಿತ್ತು.

ವಿಧಾನಸಭೆಗೆ ಆಯ್ಕೆಯಾಗಿರುವ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರು ಶಾಸಕರಾಗಿ ಬುಧವಾರ ಸ್ಪೀಕರ್ ಡಾಂಕುಪರ್ ರಾಯ್ ಅವರ ಮುಂದೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಅಸೆಂಬ್ಲಿ ಕಮಿಷನರ್ ಮತ್ತು ಕಾರ್ಯದರ್ಶಿ ಆಂಡ್ರ್ಯೂ ಸೈಮನ್ಸ್ ಹೇಳಿದ್ದಾರೆ. ಕಾನ್ರಾಡ್ ಅವರು ಲೋಕಸಭೆಯ ಮಾಜಿ ಸ್ಪೀಕರ್ ಪಿ.ಎ. ಸಂಗ್ಮಾ ಅವರ ಪುತ್ರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...